ಮೈಸೂರು :ನಂಬಿಕೆ ಮತ್ತು ವಿಜ್ಞಾನದ ಸಮ್ಮೀಳಿತವಾಗಿರುವ ಆಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಲಿರುವ ಬಾಲರಾಮನನ್ನು ಅತ್ಯಂತ ಪ್ರಾಚೀನ ಕಲ್ಲನ್ನು ಬಳಸಿ ರಚಿಸಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ದೇವರ ವಿಗ್ರಹಗಳಿಗೆ ಬಳಸಲಾಗುವ ಪ್ರಾಚೀನ ಶಿಲೆಯನ್ನೇ ರಾಮಲಲಾ ನಿರ್ಮಿಸಲು ಉಪಯೋಗಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಶ್ರೀಕಂಠಪ್ಪ ತಿಳಿಸಿದ್ದಾರೆ