ತುಮಕೂರು : ಮಗುವೊಂದರ ಅಪಹರಣ ಪ್ರಕರಣದ ಬೆನ್ನು ಬಿದ್ದ ಪೊಲೀಸರು ತುಮಕೂರಲ್ಲಿ ದೊಡ್ಡ ಮಕ್ಕಳ ಮಾರಾಟ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಾಗಿ ಅಕ್ರಮ ಸಂಬಂಧದಿಂದ ಹುಟ್ಟುವ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡುತ್ತಿದ್ದ ಜಾಲದ ಏಳು ಆರೋಪಿಗಳನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆರೋಪಿಗಳು ಮಾರಾಟ ಮಾಡಿದ್ದ ಐದು ಮಕ್ಕಳನ್ನೂ ರಕ್ಷಿಸಿದ್ದಾರೆ
ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯವಸ್ಥಾಪಕನಾಗಿರುವ ತುಮಕೂರಿನ ಮಹೇಶ್ ಯು.ಡಿ (39 ವರ್ಷ), ಹುಳಿಯಾರಿನ ಫಾರ್ಮಾಸಿಸ್ಟ್ ಮೆಹಬೂಬ್ ಷರೀಫ್ (52ವರ್ಷ)), ಟ್ಯಾಟೂ ಹಾಕುವ ಗುಬ್ಬಿ ತಾಲೂಕಿನ ಬಿಕ್ಕೇಗುಡ್ಡದ ಕೆ.ಎನ್. ರಾಮಕೃಷ್ಣ (53ವರ್ಷ)), ತುಮಕೂರಿನ ಹನುಮಂತ ರಾಜು (45ವರ್ಷ)), ಮಂಡ್ಯ ಜಿಲ್ಲೆನಾಗಮಂಗಲ ತಾಲೂಕು ಬೆಳ್ಳೂರಿನ ಮುಬಾರಕ್ ಪಾಷ (44ವರ್ಷ)), ಮಧುಗಿರಿ ತಾಲೂಕು ದೊಡ್ಡರಿ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಪೂರ್ಣಿಮಾ ಎನ್ (39ವರ್ಷ)), ಶಿರಾ ಜ್ಯೋತಿನಗರದ ಹಂಗಾಮಿ ನರ್ಸ್ ಸೌಜನ್ಯ (48ವರ್ಷ)) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು 50. ಸಾವಿರ ನಗದು 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಕೆ ವಿ ಅಶೋಕ್ ಮಾಹಿತಿ ನೀಡಿದ್ದಾರೆ