Home » 200 ವರ್ಷದ ಅರಳಿಮರ ಧರಶಾಯಿ
 

200 ವರ್ಷದ ಅರಳಿಮರ ಧರಶಾಯಿ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯ ಅಮ್ಮರಸನ ಮನೆ ಬಳಿಯಿರುವ 200 ರಿಂದ 250 ವರ್ಷದ ಅರಳಿಮರವು ಇಂದು ಭಾರಿ ಮಳೆಗೆ ಧರಶಾಯಿಯಾಗಿದೆ

ಬೃಹತ್‌ ಗಾತ್ರದ ಅರಳಿಮರ ಉರುಳಿ ಬಿದ್ದಿದ್ದರಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಅರಳಿ ಮರವು ಪಕ್ಕದ ಹಳೇಕೋಟೆ ಮನೆಯ ಕಂಪೌಂಡ್‌ ನ ಒಳಗೆ ಬಿದ್ದಿದ್ದು ಪಕ್ಕದಲ್ಲಿರುವ ಟ್ರಾನ್ಸಫರ್ಮರ್‌ ಸೇರಿದಂತೆ 4-5 ವಿದ್ಯುತ್ ಕಂಬಗಳು ತುಂಡಾಗಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದ್ದು ಅರಳಿಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

ಕುಂದಾಪುರ ನಗರ ಠಾಣೆಯ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಚಿಕ್ಕಮ್ಮನ ಸಾಲು ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ

ಅರಳಿಮರದ ಬುಡದಲ್ಲಿ ಪ್ರತಿಷ್ಠಾಪಿಸಿದ್ದ ನಾಗ ದೇವರ ಕಲ್ಲುಗಳು ಕೂಡ ಜಖಂಗೊಂಡಿದೆ  

   

Related Articles

error: Content is protected !!