ಕುಂದಾಪುರ : ಹಳೆಗನ್ನಡದ ಅದೆಷ್ಟೋ ಪದಗಳು ಇಂದು ಬಳಕೆಯಿಂದ ಮರೆಯಾಗುತ್ತಿದೆ. ಬಳಕೆಯಾಗದ ಪದಗಳಿಂದ ಭಾಷೆ ನಾಶವಾಗುತ್ತದೆ. ಭಾಷಾ ಸೊಗಡು ಪದಗಳಲ್ಲಿ ಅಡಗಿದೆ ಎಂದು ಕುಂದಾಪುರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ರವಿವಾರ ಸಂಜೆ ಇಲ್ಲಿನ ಬೋರ್ಡ್ ಹೈಸ್ಕೂಲಿನ ರೊಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ 3 ವತಿಯಿಂದ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಕನ್ನಡದ ನೆಲೆಯಲ್ಲಿ ಹಳೆಗನ್ನಡದ ಸೊಬಗು ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು ಉದ್ಯಮಿಗಳಾದ ಮಹಾಬಲ ಪೂಜಾರಿ, ಮೌಲಾನಾ ಇಬ್ರಾಹಿಂ, ಕಲಾಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಬಿ., ಸದಸ್ಯ ಗೋಪಾಲ್ ಉಪಸ್ಥಿತರಿದ್ದರು.