Home » ಜಿಲ್ಲಾ ಅಪರಾಧ ಸುದ್ದಿಗಳು
 

ಜಿಲ್ಲಾ ಅಪರಾಧ ಸುದ್ದಿಗಳು

by Kundapur Xpress
Spread the love

ಬೈಕ್‌ನಿಂದ ಬಿದ್ದು ಸಾವು

ಚಲಿಸುತ್ತಿದ್ದ ಬೈಕ್‌ನಿಂದ ಆಯತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರರಾದ ಸುಶೀಲಾ(65) ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

ಅವರು ಉಡುಪಿಯ  ರಾಂಪುರ ಕಡೆಯಿಂದ ಅಲೆವೂರು ಕಡೆಗೆ ತನ್ನ ಪುತ್ರನ ಬೈಕ್‌ನಲ್ಲಿ ಬರುತ್ತಿದ್ದು ಅಲೆವೂರು ಗಣಪತಿ ಕಟ್ಟೆ ಸುಬೋಧಿನಿ ಶಾಲೆಯ ಹತ್ತಿರದ ರಸ್ತೆಗೆ ಅಳವಡಿಸಿದ ಹಂಪ್ ಮೇಲೆ ಬೈಕ್ ವೇಗವಾಗಿ ಚಲಿಸಿದಾಗ ಆಯತಪ್ಪಿ ರಸ್ತೆಗೆ ಬಿದ್ದರು. ಅವರ ತಲೆಗೆ ತೀವ್ರ ಗಾಯವಾಗಿತ್ತು. ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಅವರು  ಮೃತಪಟ್ಟಿದ್ದಾರೆ ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

ಮುಳ್ಳು ಹಂದಿ ಮಾಂಸ ಪತ್ತೆ

ಮೂಡುಬಗೆ ಎಂಬಲ್ಲಿ ವನ್ಯಜೀವಿ ಮುಳ್ಳು ಹಂದಿಯನ್ನು ಹತ್ಯೆಗೈದು ಮಾಂಸ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದನ್ನು ಸ್ಥಳೀಯ ಅರಣ್ಯ ಸಿಬ್ಬಂದಿ ಸಹಯೋಗದೊಂದಿಗೆ ಶಂಕರ ನಾರಾಯಣ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂಡುಬಗೆಯ ಬಸವ ಬಿನ್ ರಾಮ ಎಂಬವರ ಮನೆಯನ್ನು ಶೋಧಿಸಿದಾಗ ಫ್ರಿಡ್ಜ್‌ನಲ್ಲಿ ಮುಳ್ಳುಹಂದಿ ಮಾಂಸ ಪತ್ತೆಯಾಗಿದೆ.

ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ರೇಷ್ಠಾ ಫರಾವೂ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಶಂಕರ ನಾರಾಯಣ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಹಾಗೂ ಆರ್ಮ್ಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ 

ವರದಕ್ಷಿಣೆಗಾಗಿ ಪತಿ ಮತ್ತು ಅವರ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಹೆಮ್ಮಾಡಿ ನಿವಾಸಿ ಜಯಲಕ್ಷ್ಮೀ ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕು ಕೋಳಿಗಳಿಗೆ ವಿಷ

ನೆರೆಹೊರೆಯವರು ವಿಷ ಹಾಕಿ ಸಾಕು ಕೋಳಿಗಳನ್ನು ಸಾಯಿಸಿದ್ದಾರೆ ಎಂದು ಕೆರಾಡಿ ಗ್ರಾಮದ ಹಯ್ಯಂಗಾರು ನಿವಾಸಿ ಬೇಬಿ  ಎಂಬವರು ದೂರು ನೀಡಿದ್ದಾರೆ.

ಮನೆಯ ಪಕ್ಕದ ನಿವಾಸಿಗಳಾದ ಸಾಧು, ಆನಂದ, ಬಚ್ಚು ಮತ್ತು ಗಿರಿಜಾ ಎಂಬವರು ಜಾಗಕ್ಕೆ ಅಕ್ರಮ ಪ್ರವೇಶಿಸಿ ಸಾಕಿದ್ದ ಕೋಳಿಗಳಿಗೆ ವಿಷ ಹಾಕಿ 12 ಕೋಳಿ ಗಳನ್ನು ಸಾಯಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಕ್ರಮ ಮರಳು ವಶ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಪೆ ತೊಟ್ಟು ಕಡೆಯಿಂದ ವಡ ಭಾಂಡೇಶ್ವರ ಕಡೆಗೆ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಲಾರಿ ಹೋಗುತ್ತಿತ್ತು. ಅನುಮಾನಗೊಂಡ ಪೊಲೀಸರು ವಾಹನವನ್ನು ಹಿಂಬಾಲಿಸಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಲಾರಿ ಚಾಲಕ ಬಲರಾಮ ಎಂಬಾತ ವಾಹನ ವನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ವಾಹನ ಪರಿಶೀಲಿಸಿದ್ದು ಯಾವುದೇ ಪರವಾನಗಿ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   

Related Articles

error: Content is protected !!