ಉಡುಪಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಲ್ಲಿ ಒಬ್ಬರಾದ ಸುರೇಶ್ ಭಯ್ಯಾಜಿ ಜೋಶಿಯವರು ಶುಕ್ರವಾರ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾದರು .
ದೇಶಾದ್ಯಂತ ನಡೆಯುತ್ತಿರುವ ಕೆಲವು ಅಚ್ಚರಿಯ ಘಟನೆಗಳು ಬಾಂಗ್ಲಾ ದೇಶೀಯರ ಅಕ್ರಮ ನುಸುಳುಕೋರರ ಸಮಸ್ಯೆ ಮಣಿಪುರದಲ್ಲಿ ಶಾಂತಿ ಸುರಕ್ಷತೆ ವಕ್ಫ್ ಬೋರ್ಡಿನ ಅವಾಂತರಗಳು ತರುತ್ತಿರುಚ ಆತಂಕ ಕಾಶ್ಮೀರದ ಭಯೋತ್ಪಾದನೆ ಇತ್ಯಾದಿ ಗಳ ಬಗ್ಗೆ ಸಮಾಲೋಚನೆ ನಡೆಸಿದರು .
ಇಂಥಹ ಸಮಸ್ಯೆಗಳ ಪರಿಹಾರಕ್ಕೆ ಸಂಘದ ಹೆಜ್ಜೆಗಳು ಸಂಘದ ಶತಾಬ್ದಿಯ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸನಾತನ ಧರ್ಮ ಮತ್ತು ರಾಷ್ಟ್ರದ ಹಿತರಕ್ಷಣೆಯ ಕೆಲಸಗಳಲ್ಲಿ ಸಾಧು ಸಂತರು ಮಠಾಧೀಶರು ವಹಿಸಬೇಕಾದ ಮಹತ್ವದ ಭೂಮಿಕೆಯ ಕುರಿತೂ ಭಯ್ಯಾಜಿಯವರು ವಿಚಾರ ವಿನಮಯ ನಡೆಸಿದರು.
ಶ್ರೀಗಳವರು ಹಮ್ಮಿಕೊಂಡ ಕೋಟಿ ಗೀತಾ ಲೇಖನ ಯಜ್ಞದಂಥಹ ಅಭಿಯಾನಗಳು ಸಮಾಜದಲ್ಲಿ ಉದಾತ್ತ ಮೌಲ್ಯಗಳ ಸ್ಥಿರೀಕರಣಕ್ಕೆ ನೆರವಾಗಬಹುದೆಂದು ಆಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ಭಯ್ಯಾಜಿಯವರನ್ನು ಸನ್ಮಾನಿಸಿ ಅನುಗ್ರಹಿಸಿದರು. ಸಂಘದ ಹಿರಿಯರಾದ ಭಾರತ ಪರಿಕ್ರಮ ಯಾತ್ರೆಗೈದ ಸೀತಾರಾಮ ಕೆದಿಲಾಯ , ಸುಧೀರ್ ಜಿ , ಗುರುನಾಥ್ ಮತ್ತು ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು