ಸುಕ್ಮಾ : ಉಡುಪಿಯ ಹೆಬ್ರಿಯಲ್ಲಿ ಮಾವೋವಾದಿ ನಾಯಕ ವಿಕ್ರಂ ಗೌಡನ ಎನ್ಕೌಂಟರ್ ಬೆನ್ನಲ್ಲೇ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ 10 ನಕ್ಸಲರನ್ನು ಶುಕ್ರವಾರ ಹೊಡೆದುರುಳಿಸಲಾಗಿದೆ.
ಭಜ್ಜಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅರಣ್ಯದಲ್ಲಿ ಬೆಳಗ್ಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಪೊಲೀಸ್ ಇನ್ಸೆಕ್ಟರ್ ಜನರಲ್ ಸುಂದರಾಜ್ ಪಿ. ತಿಳಿಸಿದ್ದಾರೆ. ಕೊರಜ್ಜುಡ, ದಂಟಿಸುರಂ, ನಗರಂ ಮತ್ತು ಭಂಡಾರ್ಪಾದರ್ ಗ್ರಾಮಗಳ ಅರಣ್ಯ ಬೆಟ್ಟಗಳಲ್ಲಿ ನಕ್ಸಲರ ಕೊಂಟಾ ಮತ್ತು ಕಿಸ್ತಾರಾಮ್ ಪ್ರದೇಶ ಸಮಿತಿಗಳಿಗೆ ಸೇರಿದ ಮಾವೋವಾದಿಗಳು ಇರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಘಟನಾ ಸ್ಥಳದಿಂದ 10 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಐಎನ್ಎಸ್ ಎಎಸ್ ರೈಫಲ್, ಎಕೆ -47 ರೈಫಲ್, ಸೆಲ್ಫ್ ಲೋಡಿಂಗ್ ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ