ಮೆಲ್ಬರ್ನ್ : ಛಲ, ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅಮೆರಿಕದ ಟೆನಿಸ್ ಆಟಗಾರ್ತಿ ಮ್ಯಾಡಿಸನ್ ಕೀಸ್ ತೋರಿಸಿಕೊಟ್ಟಿದ್ದಾರೆ 8 ವರ್ಷ ಬಳಿಕ ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದ್ದ ಮ್ಯಾಡಿಸನ್ ಶನಿವಾರ ಆಸ್ಟ್ರೇಲಿಯನ್ ಓಪನ್ ಮಹಿಳಾ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
46ನೇ ಬಾರಿಗೆ ಗ್ರ್ಯಾನ್ ಸ್ಲಾಂನಲ್ಲಿ ಆಡಿದ ಮ್ಯಾಡಿಸನ್ 2023, 2024’ಆಸ್ಟ್ರೇಲಿಯನ್ ರಾಣಿ’ಯಾಗಿದ್ದ ಬೆಲಾರುಸ್ನ ಅರೈನಾ ಸಬಲೆಂಕಾ ವಿರುದ್ಧ 6-3, 2-6, 7-5 ಗಳಲ್ಲಿ ರೋಚಕ ಗೆಲುವು ಸಾಧಿಸಿ ಮೊದಲ ಬಾರಿಗೆ ಗ್ಯಾನ್ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು
ವಿಶ್ವನಂ.1 ಸಬಲೆಂಕಾ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದ ಮ್ಯಾಡಿಸನ್ ಕೀಸ್, ಸೆಮೀಸ್ನಲ್ಲಿ ವಿಶ್ವ ನಂ.2 ಇಗಾ ಸ್ವಿಯಾಟೆಕ್ ವಿರುದ್ಧ ಜಯಿಸಿದ್ದರು. ಇದರೊಂದಿಗೆ 2005ರಲ್ಲಿ ಸೆರೆನಾ ವಿಲಿಯಮ್ ಬಳಿಕ ಮೆಲ್ಬರ್ನ್ ಪಾರ್ಕ್ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ -2 ಸ್ಥಾನದಲ್ಲಿರುವ ಆಟಗಾರ್ತಿಯರಿಬ್ಬರನ್ನೂ ಸೋಲಿಸಿದ ಮೊದಲ ಆಟಗಾರ್ತಿ ಎನಿಸಿದರು.
ಫೈನಲ್ಗೂ ಮುನ್ನ ವಿಶ್ವ ಬ್ಯಾಂಕಿಂಗ್ನಲ್ಲಿ 14ನೇ ಸ್ಥಾನದಲ್ಲಿದ್ದ ಕೀಸ್, ಈ ಟೂರ್ನಿಯಲ್ಲಿ 19ನೇ ಶ್ರೇಯಾಂಕ ಪಡೆದಿದ್ದರು. 2017ರ ಯುಎಸ್ ಓಪನ್ನ ಫೈನಲ್ನಲ್ಲಿ ಆಡಿದ್ದ ಕೀಸ್, ಆ ನಂತರ ಗ್ಯಾನ್ ಸ್ಲಾಂ ಫೈನಲ್ಗೇರಿದ್ದು ಇದೇ ಮೊದಲು.