Home » 2026ಕ್ಕೆ ತ.ನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ
 

2026ಕ್ಕೆ ತ.ನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ

ರಾಜ್ಯಾಧ್ಯಕ್ಷ ಅಣ್ಣಾಮಲೈ

by Kundapur Xpress
Spread the love

ಚೆನ್ನೈ : 2026ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಹೇಳಿದ್ದಾರೆ. ಚೆನ್ನೈನ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ ದ್ರಾವಿಡ ಪಕ್ಷಗಳಂತಹ ಪ್ರಮುಖ ಸಾಂಸ್ಕೃತಿಕ ಐಕಾನ್‌ ಗಳಿಲ್ಲದ ರಾಜ್ಯದಲ್ಲಿ ಬಿಜೆಪಿ ತಡವಾಗಿ ಆರಂಭವಾಗಿದೆ. ಆದರೆ ಈಗ ದ್ರಾವಿಡ ರಾಜಕೀಯ ಪಕ್ಷಗಳ ಸಾಂಸ್ಕೃತಿಕ ಐಕಾನ್‌ಗಳು ಹಳೆಯದಾಗಿದೆ ಎಂದು ನುಡಿದರು.

ರಾಜಕೀಯದಲ್ಲಿ ಜನರು ಪರ್ಯಾಯ ಚರ್ಚೆಗಾಗಿ ಕಾಯುತ್ತಿದ್ದಾರೆ. ಅಂತೆಯೇ ತಮಿಳುನಾಡಿನ ವೈಭವನ್ನು ಮತ್ತು ಆರ್ಥಿಕತೆಯನ್ನು ಪುನಃಸ್ಥಾಪಿಸಲು ಬದಲಾವಣೆಯ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಈ ವೇಳೆ ಚಪ್ಪಲಿ ಧರಿಸದಿರುವ ನಿರ್ಧಾರದ ಬಗ್ಗೆ ಪ್ರಶ್ನೆಗೆ ಉತ್ತರಿಸಿದಣ್ಣಾಮಲೈ, ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವುದು ತಮಿಳುನಾಡಿನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದರು

 

Related Articles

error: Content is protected !!