Home » ಭಾರತ ಮೂಲದ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಪ್ರಶಸ್ತಿ
 

ಭಾರತ ಮೂಲದ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಪ್ರಶಸ್ತಿ

by Kundapur Xpress
Spread the love

ಹೊಸದಿಲ್ಲಿ: ಭಾರತೀಯ-ಅಮೆರಿಕನ್ ಜಾಗತಿಕ ಉದ್ಯಮಿ ಮತ್ತು ಸಂಗೀತಗಾರ್ತಿ ಮಂಗಳೂರು ಮೂಲದ ಅಮೇರಿಕನ್ ಉದ್ಯಮಿ ಇಂದಿರಾ ನೂಯಿ ಸಹೋದರಿ ಚಂದ್ರಿಕಾ ಟಂಡನ್ ಭಾನುವಾರ 67ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಪ್ರಾಚೀನ ಮಂತ್ರಗಳನ್ನು ವಿಶ್ವ ಸಂಗೀತದೊಂದಿಗೆ ಬೆರೆಸುವ ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ.

ಟಂಡನ್ ಅವರು ತಮ್ಮ ಇತ್ತೀಚಿನ ಸಹಯೋಗದ ಆಲ್ಬಂಗಾಗಿ ಅತ್ಯುತ್ತಮ ನವಯುಗ, ಆಂಬಿಯೆಂಟ್ ಅಥವಾ ಚಾಂಟ್ ಅಲ್ಲಂ ವಿಭಾಗದಲ್ಲಿ ಗ್ರಾಮಫೋನ್ ಪ್ರಶಸ್ತಿ ಗೆದ್ದಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ಫೂಟಿಸ್ಟ್ ವೂಟರ್ ಕೆಲ್ಲರ್ಮನ್ ಮತ್ತು ಜಪಾನಿನ ಸೆಲ್ಲಿಸ್ಟ್ ಎರು ಮಾಟ್ಟುಮೊಟೊ ಅವರೊಂದಿಗೆ ಮೂರು ನದಿಗಳ ಸಂಗಮದ ಹೆಸರಿನ ಆಲ್ಬಂನಲ್ಲಿ ಹಳೆ ವೈದಿಕ ಮಂತ್ರಗಳನ್ನು ಪ್ರಸ್ತುತಪಡಿಸಿದ್ದಾರೆ. ಇದರ ಜತೆಗೆ ಅವುಗಳ ಮೂರು ವಿಭಿನ್ನ ಶೈಲಿಗಳನ್ನು ಪ್ರತಿನಿಧಿಸಿದರು.

ಸಂಗೀತವು ಪ್ರೀತಿಯಾಗಿದೆ. ಸಂಗೀತವು ನಮ್ಮೆಲ್ಲರೊಳಗಿನ ಬೆಳಕನ್ನು ಬೆಳಗಿಸುತ್ತದೆ. ನಮ್ಮ ಕರಾಳ ದಿನಗಳಲ್ಲಿಯೂ, ಸಂಗೀತವು ಸಂತೋಷ ಮತ್ತು ನಗುವನ್ನು ಹರಡುತ್ತದೆ ಎಂದು ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವಾಗ ಟಂಡನ್ ಹೇಳಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಟಂಡನ್, ರೇಷ್ಮೆ ಸಲ್ವಾರ್ ಕುರ್ತಾ ಧರಿಸಿ, ಸುಂದರ ಹಾರವನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Related Articles

error: Content is protected !!