ಕಾರವಾರ : ಜಿಲ್ಲೆಯಲ್ಲಿ ಇನ್ನುಮುಂದೆ ಗೋ ಹತ್ಯೆ ಏನಾದ್ರೂ ನಡೆದರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾಕಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಗುಡುಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊನ್ನಾವರದ ಸಾಲಕೋಡು ಅರಣ್ಯದಲ್ಲಿ ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಕುರಿತು ಪ್ರತಿಕ್ರಯಿಸಿದ ಅವರು ಗೋ ಹತ್ಯೆ ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲೂ ಜಿಲ್ಲೆಯಲ್ಲಿ ಗೋ ಹತ್ಯೆ ಆಗಿದೆ. ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ದಿನಕರ ಶೆಟ್ಟರೇನು ದಿನಕರ ಖಾನ್ ಆಗಿದ್ದಾರಾ ಎಂದು ಪ್ರಶ್ನಿಸಿದರು.
ದಿನಕರ ಶೆಟ್ಟಿರವರು ನಮ್ಮ ಸಿಎಂ ಬಗ್ಗೆ, ಸಚಿವರ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡಿದರೆ ಸುಮ್ಮನೆ ಸಹಿಸಿಕೊಂಡು ಇರಲು ಆಗದು. ಗೋ ಹಂತಕರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ ಆರೋಪಿಗಳನ್ನ ಕೂಡಲೆ ಬಂಧಿಸಿ ಶಿಕ್ಷೆನೀಡುವಂತೆ ಹೇಳಿದ್ದೇನೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ಅದರ ಮುಂದೆ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ.
ಇನ್ನುಮುಂದೆ ಯಾವುದೇ ಕಾರಣಕ್ಕೂ ಗೋ ಕಳ್ಳತನ, ಗೋ ಹತ್ಯೆ ಆಗಬಾರದು ಗೋ ಹತ್ಯೆ ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕುತ್ತೇವೆ ಎಂದರು.
ದುಡಿದುಕೊಂಡು ತಿನ್ನೋಕೆ ಬಹಳಷ್ಟು ದಾರಿ ಇದೆ ಬದುಕಿ ಜೀವನ ಮಾಡಿ, ಗೋ ಹತ್ಯೆ ಮಾಡಿ ಜೀವನ ಮಾಡುವುದನ್ನು ನಿಲ್ಲಿಸಿ, ಗೋ ಹತ್ಯೆ ಹಿಂದೆ ಯಾವುದೇ ಧರ್ಮದವರಿದ್ದರೂ ರಕ್ಷಣೆ ಮಾಡುವ ಪ್ರಶ್ನೆಯೆ ಇಲ್ಲ ಎಂದರು.