ಕುಂದಾಪುರ : ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ ಮತ್ತು ಶ್ರೀ ಚಕ್ರಮ್ಮ ಸಭಾಭವನ ಸಮಿತಿ ಕೋಡಿ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರದ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಬಳಿ ನಿರ್ಮಿಸಲ್ಪಟ್ಟ ಶ್ರೀ ಚಕ್ರಮ ಸಭಾಭವನದ ಉದ್ಘಾಟನಾ ಸಮಾರಂಭವು ನಾಳೆ ಫೆ. 5 ಬುಧವಾರ ಬೆಳಗ್ಗೆ ಗಂಟೆ 10.30ಕ್ಕೆ ನಡೆಯಲಿದೆ.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾಭವನವನ್ನು ಮುಂಬಯಿ ಉದ್ಯಮಿ ಎನ್.ಟಿ. ಪೂಜಾರಿ, ಭೋಜನಶಾಲೆಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಪಾಕಶಾಲೆಯನ್ನು ಡಾ| ಪದ್ಮನಾಭ ಕಿಣಿ ಕೋಡಿ, ಸಭಾಭವನದ ಕಚೇರಿಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಲಿದ್ದಾರೆ.
‘ಶ್ರೀ ಚಕ್ರಮ ಸಭಾಭವನ ಸಮಿತಿ ಅಧ್ಯಕ್ಷ ಶಂಕರ ಪಿ. ಪೂಜಾರಿ ಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ, ಶ್ರೀ ಚಕ್ರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೋಡಿ ಗೋಪಾಲ ಪೂಜಾರಿ ದೀಪ ಬೆಳಗಿಸಲಿದ್ದಾರೆ. ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ, ಶ್ರೀ ಚಕ್ರಮ ದೇವಸ್ಥಾನ ಕೋಡಿಯ ಪಾತ್ರಿಗಳಾದ ರಾಘವೇಂದ್ರ ಪೂಜಾರಿ, ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಉದ್ಯಮಿ ದಿನೇಶ್ ಕುಂದಾಪುರ, ಕರ್ಣಾಟಕ ಬ್ಯಾಂಕ್ ಉಡುಪಿ ಸಹಾಯಕ ಮಹಾ ಪ್ರಬಂಧಕ ವಾದಿರಾಜ್ ಭಟ್, ಬ್ಯಾರೀಸ್ ಗ್ರೂಫ್ ಆಫ್ ಇನ್ ಸ್ಟಿಟ್ಯೂಟ್ ಕೋಡಿ ಮ್ಯಾನೇಜಿಂಗ್ ಟ್ರಸ್ಟಿ ಮೊಹಮ್ಮದ್ ಸೈಯದ್ ಬ್ಯಾರಿ, ಎಂಜಿನಿಯರ್ ಸತೀಶ ಪೂಜಾರಿ, ರಮೇಶ್ ಪೂಜಾರಿ ಮಣಿಗೇರಮನೆ, ಪ್ರಧಾನ ಕಾರ್ಯದರ್ಶಿ ಯೋಗೇಶ ಪೂಜಾರಿ ಭಾಗವಹಿಸಲಿದ್ದಾರೆ
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭವು ಅದೇ ದಿನ ಸಂಜೆ ನಡೆಯಲಿದ್ದು ಊರಿನ ಪ್ರತಿಭಾವಂತ ಕಲಾವಿದರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿಗಳಾದ ತಿಮ್ಮಪ್ಪ ಖಾರ್ವಿ, ನಾಗೇಶ್ ಪುತ್ರನ್, ಆನುವಂಶೀಯ ಆಡಳಿತ ಮೊಕೇಸರ ಪಂಜು ಆರ್. ಪೂಜಾರಿ, ಪುರಸಭಾ ಸದಸ್ಯರಾದ ಲಕ್ಷ್ಮೀ ಗೋಪಾಲ ಪೂಜಾರಿ, ಕಮಲ ಮಂಜುನಾಥ ಪೂಜಾರಿ, ಅಶ್ವಕ್ ಕೋಡಿ ಮೊದಲಾದವರು ಭಾಗವಹಿಸಲಿದ್ದಾರೆ. ಮೂರು ಮುತ್ತು ಖ್ಯಾತಿಯ ಕುಳ್ಳಪ್ಪು ತಂಡದಿಂದ ಹಾಸ್ಯಮಯ ನಗೆ ನಾಟಕ ‘ಗಿರಾಕಿಯೇ ಇಲ್ಲ ಮಾರಾಯ’ ನಡೆಯಲಿದೆ
ಸುಸಜ್ಜಿತ ಸಭಾಭವನ
ಚಕ್ರಮ್ಮ ಸಭಾಭವನದಲ್ಲಿ 1000 ಜನರ ಆಸನದ ವ್ಯವಸ್ಥೆ ಇದ್ದು 400 ಆಸನದ ಭೋಜನ ಶಾಲೆ ಇದೆ. ಸುಸಜ್ಜಿತ ಪಾಕಶಾಲೆ ಮಾಡಲಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಬಹುದು. ಹೂವಿನ ಅಲಂಕಾರದ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.