Home » ಹೇರಿಕುದ್ರು : ಸ್ವಾಗತ ಗೋಪುರ ಸಮರ್ಪಣೆ
 

ಹೇರಿಕುದ್ರು : ಸ್ವಾಗತ ಗೋಪುರ ಸಮರ್ಪಣೆ

by Kundapur Xpress
Spread the love

ಕುಂದಾಪುರ : ಸಮೀಪದ ಹೇರಿಕುದ್ರುವಿನಲ್ಲಿ ಶ್ರೀ ಕಾಮಲಿಂಗೇಶ್ವರ ಮತ್ತು ಶ್ರೀ ಮಹಂಕಾಳಿ ದೈವಸ್ಥಾನ ಹಾಗೂ ಸಪರಿವಾ ದೈವಸ್ಥಾನದ ಗೆಂಡ ಮಹೋತ್ಸವವು ಇಂದು ದಿನಾಂಕ ಫೆ. 07 ರಂದು ಜರುಗಲಿದ್ದು ಆ ಪ್ರಯುಕ್ತ ಸ್ವಾಗತ ಗೋಪುರವನ್ನು ಸಮರ್ಪಿಸಲಾಯಿತು

ಇಂದು ಗೆಂಡ ಮಹೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸ್ವಾಗತ ಗೋಪುರಕ್ಕೆ ಪುಷ್ಪಾರ್ಷನೆಗೈಯಲಾಯಿತು

ಇಂದು ರಾತ್ರಿ 10.00 ಗಂಟೆಗೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಕಳವಾಡಿ ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ

ನಾಳೆ ದಿನಾಂಕ ಫೆ.08 ರಂದು ಶ್ರೀ ಮೂಡೂರ ಹೈಗುಳಿ ಹಾಗೂ ಶ್ರೀ ನಂದಿಕೇಶ್ವರ ಮತ್ತು ಸಪರಿವಾರ ದೈವಗಳ ಸನ್ನಿಧಿಯಲ್ಲಿ ಗೆಂಡ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವಿಧಾತ್ರಿ ಕಲಾವಿದರಿಂದ ದೈವರಾಜ ಶ್ರೀ ಬಬ್ಬುಸ್ವಾಮಿ ಪ್ರದರ್ಶನಗೊಳ್ಳಲಿದೆ

 

Related Articles

error: Content is protected !!