Home » ದಿ.ಮಾಧವ ಪೂಜಾರಿಯವರ ಸಭಾಭವನದ ಕನಸು ಇಂದು ನನಸಾಗಿದೆ
 

ದಿ.ಮಾಧವ ಪೂಜಾರಿಯವರ ಸಭಾಭವನದ ಕನಸು ಇಂದು ನನಸಾಗಿದೆ

ಕೋಡಿ ಗೋಪಾಲ್‌ ಪೂಜಾರಿ

by Kundapur Xpress
Spread the love

ಕುಂದಾಪುರ : ಸುಮಾರು 650 ವರ್ಷಗಳ ಇತಿಹಾಸ ಹೊಂದಿದ ಶ್ರೀ ಚಕ್ರಮ್ಮ ದೇವಸ್ಥಾನಕ್ಕೆ ಸಭಾ ಭವನ ಬೇಕು ಎನ್ನುವುದು ಹಿಂದಿನ ಪಾತ್ರಿಗಳಾದ ದಿ। ಮಾಧವ ಎಂ.ಪೂಜಾರಿ ಅವರ ಕನಸು. ಇಂದು ಶಂಕರ ಪೂಜಾರಿ ಅವರ ಅಧ್ಯಕ್ಷತೆಯ ಸಮಿತಿ ಮೂಲಕ ದಾನಿಗಳ ನೆರವಿನಿಂದ ನನಸಾಗಿದೆ. ಕೋಡಿ ಭಾಗದ ಜನರ ಸದುಪಯೋಗಕ್ಕೆ ಸಭಾಭವನ ದೊರೆತಿದೆ. ಎಂದು ಶ್ರೀ ಚಕ್ರಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೋಡಿ ಗೋಪಾಲ ಪೂಜಾರಿ ಹೇಳಿದರು.

ಅವರು ಬುಧವಾರ ಸಂಜೆ ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ, ಶ್ರೀ ಚಕ್ರಮ್ಮ ಸಭಾಭವನ ಸಮಿತಿ ಕೋಡಿ ಸಹಯೋಗದಲ್ಲಿ ಶ್ರೀ ಕ್ಷೇತ್ರದ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಬಳಿ ನಿರ್ಮಿಸಲ್ಪಟ್ಟ ಶ್ರೀ ಚಕ್ರಮ್ಮ ಸಭಾಭವನದ ಉದ್ಘಾಟನಾ ಸಮಾರಂಭದ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು

ಶ್ರೀ ಚಕ್ರಮ ಸಭಾಭವನ ಸಮಿತಿ ಅಧ್ಯಕ್ಷ ಶಂಕರ ಪಿ. ಪೂಜಾರಿ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ತಿಮ್ಮಪ್ಪ ಖಾರ್ವಿ ಕೋಡಿ, ನಾಗೇಶ್ ಪುತ್ರನ್ ಕೋಡಿ, ಆನುವಂಶೀಯ ಆಡಳಿತ ಮೊಕ್ತಸರ ಪಂಜು ಆರ್. ಪೂಜಾರಿ, ಪಾತ್ರಿಗಳಾದ ರಾಘವೇಂದ್ರ ಪೂಜಾರಿ, ಟ್ರಸ್ಟಿ ಸಂಜೀವ ಆರ್. ಪೂಜಾರಿ, ವಿಶ್ವನಾಥ ಪೂಜಾರಿ ಕೋಡಿ, ಪುರಸಭಾ ಸದಸ್ಯರಾದ ಲಕ್ಷ್ಮೀ ಗೋಪಾಲ ಪೂಜಾರಿ, ಕಮಲ ಮಂಜುನಾಥ ಪೂಜಾರಿ, ಅಶ್ವಕ್ ಕೋಡಿ, ಉದ್ಯಮಿ ಅಶೋಕ್ ಶೆಟ್ಟಿ ಸಂಸಾಡಿ ಉಪಸ್ಥಿತರಿದ್ದರು.

ಸಂಸಾಡಿ ಅಶೋಕ್ ಶೆಟ್ಟಿ ಮಂಜು ಬಂಗೇರ ಬೆಂಗಳೂರು, ಸುಜಾತಾ ನಾಗರಾಜ ಪೂಜಾರಿ, ರಾಧಾ ಪೂಜಾರಿ, ಸದಾನಂದ ಪೂಜಾರಿ ಹಳೆಆಳಿವೆ, ನಿತ್ಯಾನಂದ ಖಾರ್ವಿ ಕೋಡಿ, ಶಂಕರ ಖಾರ್ವಿ ಮುಂಬಯಿ, ಉಮೇಶ್ ದೇವಾಡಿಗ ಚೆನ್ನೈ, ರಾಧಾ ಸುಬ್ಬ ಮೊಗವೀರ, ಶೇಖರ ಎನ್. ಬಿಲ್ಲವ, ದೀಪಾ ರವಿ ಶೆಟ್ಟಿ ನಾರಾಯಣ ಎಂ. ಪೂಜಾರಿ ಮುಂಬಯಿ, ಪ್ರಶಾಂತ್ ಆನಂದ ಕಾಂಚನ್ ಮುಂಬಯಿ, ಸದಾಶಿವ ಗುಜರನ್, ಭಾಸ್ಕರ ತಿಮ್ಮ ಪೂಜಾರಿ ಕೋಡಿ, ಸುಧಾಕರ ಹೆರಿಯ ಪುತ್ರನ್, ರಾಧಾಕೃಷ್ಣ ಶೇರೆಗಾರ್ ದಿಲ್ಲಿ ಕಮಲ ಬಸವ ಪೂಜಾರಿ ಮೊದಲಾದ ದಾನಿಗಳನ್ನು ಸಮ್ಮಾನಿಸಲಾಯಿತು.

ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು  ಪ್ರಧಾನ ಕಾರ್ಯದರ್ಶಿ ಯೋಗೇಶ ಪೂಜಾರಿ ಸ್ವಾಗತಿಸಿ ವಂದಿಸಿದರು.

 

Related Articles

error: Content is protected !!