Home » ದೇಶಕ್ಕೆ ಮೂರ್ಖರ ರಾಜಕಾರಣ ಬೇಡ : ಮೋದಿ
 

ದೇಶಕ್ಕೆ ಮೂರ್ಖರ ರಾಜಕಾರಣ ಬೇಡ : ಮೋದಿ

by Kundapur Xpress
Spread the love

ನವದೆಹಲಿ : ದೆಹಲಿಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ದಾಖಲಿಸಿದ ಬೆನ್ನಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ದೇಶಕ್ಕೆ ಗಂಭೀರ ರಾಜಕೀಯ ಪರಿವ ರ್ತನೆ ವಿಕಸಿತ ಭಾರತದ ಅಗತ್ಯ ವಿದೆಯೇ ಹೊರತು ಮೂರ್ಖರ ರಾಜಕಾರಣ ಅಲ್ಲ ಎಂದಿದ್ದಾರೆ

ದೆಹಲಿಯ  ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಶಾರ್ಟ್‌ ಕಟ್‌ ರಾಜಕಾರಣವನ್ನು ಶಾರ್ಟ್ ಸರ್ಕಿಟ್ ಮಾಡಿರುವ ಜನಾದೇಶವು ರಾಜಕೀಯದಲ್ಲಿ ಭ್ರಷ್ಟಾಚಾರ ಹಾಗೂ ಸುಳ್ಳಿಗೆ ಜಾಗವಿಲ್ಲ ಎಂದಿದೆ

ರಾಜಕಾರಣವನ್ನು ಬದಲಿಸುತ್ತೇವೆ ಎಂದು ಬಂದ ಆಪ್ ಅಪ್ರಾಣಿಕತೆಯನ್ನು ತೋರಿತು. ಅದನ್ನು ಹೊರಗಟ್ಟಿದ ದೆಹಲಿ ಜನ ಬಿಜೆಪಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಎನ್ನುತ್ತಾ ಮೋದಿಯವರ ಗ್ಯಾರಂಟಿಯ ಮೇಲೆ ಭರವಸೆಯಿಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರ ರಾಜಧಾನಿ ವಲಯದ ಎಲ್ಲಾ ರಾಜ್ಯ ಗಳನ್ನು ಆಳುತ್ತಿದೆ ಎಂದು ಹರ್ಷಿಸಿದ್ದಾರೆ

 

Related Articles

error: Content is protected !!