Home » ವಿಶ್ವ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ
 

ವಿಶ್ವ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ

by Kundapur Xpress
Spread the love

 ಪ್ಯಾರಿಸ್ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಮಾರ್ಸೆಲ್ ನಗರದ ಐತಿಹಾಸಿಕ ಮಜಾರ್ಗ್ಯೂಸ್ ಸ್ಮಾರಕಕ್ಕೆ ಭೇಟಿ ನೀಡಿ ಮಹಾಯುದ್ಧದಲ್ಲಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ತ್ರಿವರ್ಣಗಳ ಹೂವುಗಳಿಂದ ಕೂಡಿದ ಪುಷ್ಪಗುಚ್ಛ ಅರ್ಪಿಸಿದ ಮೋದಿ, ಮೊದಲನೆಯ ಮಹಾ ಯುದ್ಧದಲ್ಲಿ ತಮ್ಮ ಫ್ರೆಂಚ್ ಸಹವರ್ತಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೈನಿಕರ  ಸ್ಮಾರಕದಲ್ಲಿ ತಲೆಬಾಗಿಸಿ ಕೈಜೋಡಿಸಿ ತಮ್ಮ ಗೌರವ ನಮನ ಸಲ್ಲಿಸಿದರು.

ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರೊಂದಿಗೆ ಇಮ್ಯಾನುಯೆಲ್ ಮ್ಯಾಕ್ರಾನ್ ಸಹ ಸ್ಥಾರಕ ಫಲಕಗಳ ಮೇಲೆ ಗುಲಾಬಿಗಳನ್ನು ಅರ್ಪಿಸಿ ಗೌರವ ನಮನ ಸಲ್ಲಿಸಿದರು.

 

Related Articles

error: Content is protected !!