21
ಅಯೋಧ್ಯೆ : ಅಯೋಧ್ಯೆ ಶ್ರೀರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (85 ವರ್ಷ) ಬುಧವಾರ ದೈವಾಧೀನರಾದರು. ಬ್ರೈನ್ ಸ್ಟೋಕ್‌ನಿಂದ ಬಳಲುತ್ತಿದ್ದ ಅವರು ಲಖನೌ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಸ್ ಜಿಪಿಜಿಐ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮುಖ್ಯ ಅರ್ಚಕರ ಸಾವಿನ ಸುದ್ದಿಯನ್ನು ಅವರ ಶಿಷ್ಯ ಪ್ರದೀಪ್ ದಾಸ್ ದೃಢಪಡಿಸಿದ್ದಾರೆ. ಆಸ್ಪತ್ರೆಯ ಅಧಿಕೃತ ಹೇಳಿಕೆಯ ಪ್ರಕಾರ ಅವರನ್ನು ಫೆಬ್ರವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮಧುಮೇಹ ಮತ್ತು ಅಧಿಕ ರಕ್ತ ದೊತ್ತಡದಿಂದ ಬಳಲುತ್ತಿದ್ದರು.
ಆಚಾರ್ಯ ಸತ್ಯೇಂದ್ರ ದಾಸ್ ಅವರು ದಶಕಗಳಿಂದ ಶ್ರೀರಾಮ ಮಂದಿರದ ಮುಖ್ಯ ಅರ್ಚಕರಾಗಿದ್ದರು. ಅಯೋಧ್ಯೆ ಸೇರಿದಂತೆ ಎಲ್ಲೆಡೆ ಅಪಾರ ಗೌರವ ಹೊಂದಿದ್ದರು
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)