Home » ಉಚಿತ ವಿದ್ಯುತ್ ಸಂಪರ್ಕ
 

ಉಚಿತ ವಿದ್ಯುತ್ ಸಂಪರ್ಕ

by Kundapur Xpress
Spread the love

ಉಡುಪಿ : ಆಸರೆ ಚಾರಿಟೇಬಲ್ ಟ್ರಸ್ಟ್( ರಿ)ಕಡಿಯಾಳಿ ವತಿಯಿಂದ  ಉಡುಪಿ ನಗರದ ಸುಬ್ರಹ್ಮಣ್ಯ ನಗರದಲ್ಲಿ 3 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು.ಫಲಾನುಭವಿಗಳಾ್ದ  ಅಮಿತ, ಶೀಲಾ ಹಾಗೂ ಸದಾಶಿವ ಇವರ ಮನೆಗೆ ದಾನಿಗಳಾದ ಖ್ಯಾತಿ ಭಟ್ ಮತ್ತು ಸ್ತುತಿ ಭಟ್, ಮಂಜುಳಾ ಶೆಣೈ ಮತ್ತು ಶೀಲಾ ಅವರ ಮನೆಯ  ವಿದ್ಯುತ್ ಸೌಲಭ್ಯವನ್ನು ನಗರಸಬೆ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಶ ಕೊಡವೂರು ಲೋಕಾರ್ಪಣೆ ಮಾಡಿದರು. ಶೀಲಾ ಅವರ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಮೂಡುಬೆಳ್ಳೆಕು ಗೌರಿ ನಾಯಕ್ ಅವರು ತಮ್ಮ ಹುಟ್ಟುಹಬ್ಬದ ಸಲುವಾಗಿ ಈ ಉಚಿತ ವಿದ್ಯುತ್ ಸಂಪರ್ಕದ ಕೊಡುಗೆಯನ್ನು ನೀಡಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯಲ್ಲಿ ದಾನಿಗಳ ಸಹಕಾರದಿಂದ 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಈ ಮೂಲಕ ಉಡುಪಿ ಇಡೀ ದೇಶಕ್ಕೆ ಮಾದರಿಯಾಗಿದೆ. ಉಡುಪಿಯನ್ನು ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕವನ್ನಾಗಿ ಪರಿವರ್ತಿಸುವುದು ನಮ್ಮ ಗುರಿ, ಡಿಸೆಂಬರ್ ಮೊದಲು ಉಡುಪಿಯಲ್ಲಿರುವ ಮನೆಗಳಿಗೆ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೆವೆ ಎಂದರು.ದಾನಿ ಮಂಜುಳಾ ಶೆಣೈ ಮಾತನಾಡಿ, ಆಸರೆ ಚಾರಿಟಬಲ್ ಟ್ರಸ್ಟ್ ಮೂಲಕ ಉಚಿತ ವಿದ್ಯುತ್ ನೀಡುವ ಮೂಲಕ ನನ್ನ ಅತ್ತೆಯ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಉಡುಪಿಯನ್ನು ಶೇ.100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲು ಆಸರೆ ಚಾರಿಟಿ ಟ್ರಸ್ಟ್ ಶ್ರಮಿಸುತ್ತಿದೆ. ಈ ಮೂಲಕ ಜನರು ಸ್ಫೂರ್ತಿ ಪಡೆಯಬೇಕು ಮತ್ತು ಅಗತ್ಯಕ್ಕೆ ಸಹಾಯ ಮಾಡಲು ಅದೇ ರೀತಿ ಮಾಡಬೇಕು ಎಂದು ನಾನು ಬಯಸುತ್ತೇನೆ.

ಮಾಜಿ ಸಿಎಂಸಿ ಸದಸ್ಯೆ ಸುಬೇಧಾ ಮಾತನಾಡಿ, ‘ಫಲಾನುಭವಿ ಸುಶೀಲಾ ವಿದ್ಯುತ್ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅಗತ್ಯ ದಾಖಲೆಗಳ ಕೊರತೆಯಿಂದ ಹೊಸ ಮನೆ ಕಟ್ಟಲು ಅವರಿಗೆ ಸಾಧ್ಯವಾಗಿಲ್ಲ. ವಿದ್ಯುತ್ ಸಂಪರ್ಕದಿಂದ ವಂಚಿತರಾಗಿರುವುದು ತಿಳಿದಾಗ ಪುರಸಭೆ ಸದಸ್ಯೆ ಜಯಂತಿ ಪೂಜಾರಿ ಅವರನ್ನು ಸಂಪರ್ಕಿಸಿದರು. ಅವರು ಆಸರೆ ಚಾರಿಟಬಲ್ ಟ್ರಸ್ಟ್‌ಗೆ ತಿಳಿಸಿ ಮತ್ತು ಟ್ರಸ್ಟ್ ನ ಮೂಲಕವಾಗಿ ವಿದ್ಯುತ್ ಸಂಪರ್ಕವನ್ನು ನಿಡಲಾಗಿದೆ.ಈ ಸಂಧರ್ಬದಲ್ಲಿ ದಾನಿಗಳಾದ ವಲ್ಲಭ ಭಟ್ ಮಲ್ಪೆ, ನಗರಸಬಾ ಸದಸ್ಯೆ ಜಯಂತಿ ಪೂಜಾರಿ, ಆಶಾ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಸತೀಶ್ ಕುಲಾಲ್, ರಾಕೇಶ್ ಜೋಗಿ, ನಾಗರಾಜ ಪ್ರಭು ಉಪಸ್ಥಿತರಿದ್ದರು

   

Related Articles

error: Content is protected !!