ಬಿ ಎಸ್ ವೈ ವಿದಾಯ ಘೋಷಣೆ
ಬೆಂಗಳೂರು: ಕರ್ನಾಟಕ ಬಿಜೆಪಿಯ ಪರಮೋಚ್ಚ ನಾಯಕ ರೈತ ಮುಖಂಡ ಹೋರಾಟಗಾರ ಶಿಕಾರಿಪುರದ ಮಣ್ಣಿನ ಮಗನಾದ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕ ರಾಜ್ಯದ 15 ನೇ ವಿಧಾನಸಭೆಯ ಅಂತಿಮ ಅಧಿವೇಶನದ ಕೊನೆಯ ದಿನದಂದು ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದರು
ಸದನದಲ್ಲಿ ಹೃದಯ ತುಂಬಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಮರಿಸಿ ನಾನು ಇಷ್ಟೊಂದು ಉನ್ನತ ಸ್ಥಾನಕ್ಕೇರಲು ಸಂಘವೇ ಕಾರಣ ಎಂದರು ಸಂಘದಲ್ಲಿ ಸಿಕ್ಕ ಅನುಭವ ಮಾರ್ಗದರ್ಶನ ಸಹಕಾರ ಹಾಗೂ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ನನಗೆ ಅಧಿಕಾರ ಇದ್ದಾಗ ಇಲ್ಲದಿದ್ದಾಗಲೂ ಸಂಘ ನೀಡಿದ ಸಹಕಾರವನ್ನು ಅವರು ಸ್ಮರಿಸಿದರು
ಶಿಕಾರಿಪುರ ಜನತೆಯ ಆಶೀರ್ವಾದದಿಂದ ಪುರಸಭೆಯ ಸದಸ್ಯನಾಗಿ ಮುಖ್ಯಮಂತ್ರಿಯೂ ಆಗಿದ್ದೆ ಹಾಗಾಗಿ ಶಿಕಾರಿಪುರ ಜನತೆಯ ಋಣವನ್ನುಎಂದಿಗೂ ಮರಯುವುದಿಲ್ಲ ಎಂದರು ಭಾರತೀಯ ಜನತಾ ಪಕ್ಷ ನನಗೆ ಎಲ್ಲಾವನ್ನು ನೀಡಿದೆ ನಾನು ಸಂತೃಪ್ತಗೊಂಡಿದ್ದೇನೆ ಮುಂದಿನ ದಿನಗಳಲ್ಲಿ ಮತ್ತೋಮ್ಮೆ ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ವರೆಗೆ ವಿರಮಿಸದೇ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ ಎಂದರು