Home » ಕುಂದಾಪುರ ತಾಲೋಕಿಗೆ ಸಾಧನೆ ಮೆರೆದ ಪ್ರಸ್ತುತಿ ಶೆಟ್ಟಿ
 

ಕುಂದಾಪುರ ತಾಲೋಕಿಗೆ ಸಾಧನೆ ಮೆರೆದ ಪ್ರಸ್ತುತಿ ಶೆಟ್ಟಿ

ಎಕ್ಸಲೆಂಟ್‌ ಕಾಲೇಜು ವಿದ್ಯಾರ್ಥಿನಿ, ಕೃಷಿ ವಿಜ್ಞಾನ ವಿಭಾಗದಲ್ಲಿ 222ನೇ ರ‍್ಯಾಂಕ್, ಕಾಲೇಜಿನಿಂದ ಸನ್ಮಾನ

by Kundapur Xpress
Spread the love

ಕುಂದಾಪುರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ  ಕುಂದಾಪುರದ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್‌ ಪಿ ಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಕುಂದಾಪುರ ಹಾಗೂ ಬ್ತೈಂದೂರು ತಾಲೋಕಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ

ಬೈಂದೂರು ತಾಲೋಕಿನ ಗುಡ್ಡೆಯಂಗಡಿ ಆಲೂರು ಶ್ರೀ ಮೂಕಾಂಬಿಕ ಹಳ್ಳಿ ಜನ್ಮನೆ ನಿವಾಸಿ ಹಾಗೂ ಅಮಾವಾಸ್ಯೆಬೈಲಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ನಾಗರಾಜ್‌ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿಯ ಪುತ್ರಿಯಾದ ಪ್ರಸ್ತುತಿ ಶೆಟ್ಟಿಯ ಸಾಧನೆಗೆ ಎಕ್ಸಲೆಂಟ್‌ ಪಿ ಯು ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿ ಕಾಲೇಜಿನಲ್ಲಿ ಸನ್ಮಾನಿಸಿದರು

ಈ ಸಂದರ್ಭದಲ್ಲಿ ಎಂ. ಎಂ ಹೆಗ್ಡೆ ಎಜುಕೇಶನಲ್‌ ಟ್ರಸ್ಟ್‌ ಇದರ ಅಧ್ಯಕ್ಷರಾದ ಮೊಳಹಳ್ಳಿ ಮಹೇಶ್‌ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್‌ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

 

Related Articles

error: Content is protected !!