Home » ಕುಂದಾಪುರ : ನಾಗಶ್ರೀಗೆ ಅಭಿನಂದನಾ ಸಮಾರಂಭ
 

ಕುಂದಾಪುರ : ನಾಗಶ್ರೀಗೆ ಅಭಿನಂದನಾ ಸಮಾರಂಭ

by Kundapur Xpress
Spread the love

ಕುಂದಾಪುರ : ರಾಮಕ್ಷತ್ರಿಯರ ಸಂಘ ಕುಂದಾಪುರ ರಾಮಕ್ಷತ್ರಿಯರ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಮತ್ತು ರಕ್ಷಾ ಚಾರೀಟೇಬಲ್ ಟ್ರಸ್ಟ್ ಕುಂದಾಪುರ ಇವರ ವತಿಯಿಂದ ನಾಗಶ್ರೀ ಗಣೇಶ್‌ರವರನ್ನು ಕುಂದಾಪುರದ ರಾಮಮಂದಿರದಲ್ಲಿ ಸನ್ಮಾನಿಸಲಾಯಿತು

ಉತ್ತರಖಂಡದಲ್ಲಿ ನಡೆದ ಏಷ್ಯಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ನಾಗಶ್ರೀ ಗಣೇಶ್‌ರವರು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ

ಕುಂದಾಪುರ ಸಮೀಪದ ಉಪ್ಪಿನಕುದ್ರು ನಿವಾಸಿಯಾದ ದಿ.ಗಣೇಶ್ ಶೇರುಗಾರ್ ಹಾಗೂ ಶ್ರೀಮತಿ ಪ್ರೇಮಲತಾ ಗಣೇಶ್ ಶೇರುಗಾರ್  ಇವರ ಪುತ್ರಿಯಾದ ನಾಗಶ್ರೀ ಗಣೇಶ್‌ ಉತ್ತರಖಂಡದಲ್ಲಿ ನಡೆದ ಏಷ್ಯಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರು ಚಿನ್ನ ಒಂದು ಬೆಳ್ಳಿ ಪಡೆಯುವುದರೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿದ್ದು ಅವರಿಗೆ ರಾಮಕ್ಷತ್ರಿಯರ ಸಮಾಜದಿಂದ ಸನ್ಮಾನಿಸಿ ಉಪ್ಪಿನಕುದ್ರುವಿಗೆ ಬೀಳ್ಕೋಡಲಾಯಿತು

ಸನ್ಮಾನ ಸಮಾರಂಭದ ವೇದಿಕೆಯಲ್ಲಿ ವಿಶ್ವ ರಾಮ ಕ್ಷತ್ರಿಯರ ಸಂಘದ ಕಾರ್ಯಾಧ್ಯಕ್ಷರಾದ ನಾಗರಾಜ್ ಕಾಮಧೇನು ಕುಂದಾಪುರ ರಾಮ ಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ್‌ ಹವಲ್ದಾರ್ ಕುಂದಾಪುರ ರಾಮ ಕ್ತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ರಾಜೇಶ್ ರಾವ್ ಕುಂದಾಪುರ ರಾಮ ಕ್ಷತ್ರಿಯ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಶ್ರೀಮತಿ ವಿದ್ಯಾ ಹಾಗೂ ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ ಹಾಗೂ ರಾಮ ಕ್ಷತ್ರಿಯರ ಸಂಘದ ಕಾರ್ಯದರ್ಶಿ ನಾಗರಾಜ್ ನಾಯ್ಕ್ ರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ್ ಬೆಟ್ಟಿನ್  ಹಾಗೂ ಸದಸ್ಯರಾದ ಚಂದ್ರಶೇಖರ್‌ ರಾವ್‌ ಮುಂತಾದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಕುಂದಾಪುರದ ಠಾಣಾಧಿಕಾರಿ ನಂಜಾ ನಾಯ್ಕ್‌ ಆಗಮಿಸಿ ನಾಗಶ್ರೀಗೆ ಶುಭ ಹಾರೈಸಿದರು ‌

ಉಪ್ಪಿನಕುದ್ರು ಮಧುಸೂದನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗರಾಜ್ ನಾಯ್ಕ್ ಸ್ವಾಗತಿಸಿ ನಾಗರಾಜ್ ಕಾಮಧೇನು ಪ್ರಸ್ತಾವಿಸಿ ರಾಮು ಹೆಗ್ಡೆ ವಂದಿಸಿದರು

 

Related Articles

error: Content is protected !!