Home » ಕುಂದಾಪುರದ ತಾಯಿ-ಮಗಳ ಸಾಹಸ
 

ಕುಂದಾಪುರದ ತಾಯಿ-ಮಗಳ ಸಾಹಸ

by Kundapur Xpress
Spread the love

ಕುಂದಾಪುರ : ಬೈಕ್‌ ಮೂಲಕ ತನ್ನ ಮಗಳೊಂದಿಗೆ ವಿಶ್ವದ ಅತೀ ಎತ್ತರದ ಪ್ರದೇಶವಾದ 19,024 ಅಡಿ ಎತ್ತರದ ಉಮ್ಮಿಂಗ್ಲಾ ಪಾಸ್‌ ನ ತುತ್ತ ತುದಿಗೇರಿ ದಾಖಲೆ ಮಾಡಿದ 55 ವರ್ಷದ ಮಹಿಳೆ ಕುಂದಾಪುರದ ವಿಲ್ಮಾ ಕ್ರಾಸ್ತಾ ಕಾರ್ವೇಲ್ಲೊ ಸಾಹಸ ಮೆರೆದಿದ್ದಾರೆ

ಕಳೆದ ವರ್ಷ ವಿಶ್ವದ ಎರಡನೇ ಎತ್ತರದ ಪ್ರದೇಶವಾದ 17,982 ಅಡಿ ಎತ್ತರದ ಲಡಾಕ್‌ ನ ಖರ್ದುಂಗ್ಲಾ ಪಾಸ್‌ ಗೆ ಅವರು ಬೈಕ್‌ ಮೂಲಕ ಬೈಕ್‌ ಸವಾರಿ ಮಾಡಿದ್ದು ಇದೀಗ ಅವರ ದಾಖಲೆಯನ್ನು ಅವರೇ ಮುರಿದಿದ್ದಾರೆ

ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯ ಕ್ರಾಸ್ತೋ ಇಂಜೀನಿಯರಿಂಗ್‌ ವರ್ಕ್ಸ್‌ ಮಾಲಕರು ಹಾಗೂ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ದಿ.ಎಡ್ವಿನ್‌ ಕ್ರಾಸ್ತಾರವರ ಮಗಳಾದ ವಿಲ್ಮಾ ಕ್ರಾಸ್ತಾ ಭಂಡಾರ್‌ಕಾರ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು ವಾಲಿಬಾಲ್‌ ಕ್ರೀಡಾ ಪಟುವಾದ ಇವರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸಿ ನಂತರ ರಾಜ್ಯ ಮಟ್ಟದ ವಾಲಿಬಾಲ್‌ ತಂಡದ ಪ್ರತಿನಿಧಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದರು

ವಿಶ್ವದ ಅತೀ ಎತ್ತರದ ಪ್ರದೇಶವಾದ 19,024 ಅಡಿ ಎತ್ತರದ ಉಮ್ಮಿಂಗ್ಲಾ ಪಾಸ್‌ ನ ತುತ್ತ ತುದಿಗೇರಿ ದಾಖಲೆ ಮಾಡಿದ ಇವರ ಸಾಧನೆಗೆ ಸಾಮಾಜಿಕ ಜಾಲಾತಾಣದ ಪತ್ರಿಕೆಯಾದ ಕುಂದಾಪ್ರ ಎಕ್ಸ್‌ಪ್ರೆಸ್‌ ಅಭಿನಂದನೆ ಸಲ್ಲಿಸಿದೆ

   

Related Articles

error: Content is protected !!