ಕುಂದಾಪುರ:ಧಾರ್ಮಿಕ ಸಾಂಸ್ಕ್ರತಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಾಬಣ್ಣ ಎಂದೇ ಕುಂದಾಪುರದ ಜನಮಾನಸದಲ್ಲಿ ಹೆಸರುವಾಸಿಯಾದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (81) ಅವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ನಿನ್ನೆ ಸೋಮವಾರ ನಿಧನ ಹೊಂದಿದ್ದರು.ಅವರು ಅವಿವಾಹಿತರಾಗಿದ್ದು ಗೆಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ 1965 ರಿಂದ ಅಧ್ಯಕ್ಷರಾಗಿ 58 ವರ್ಷಗಳ ಕಾಲ ಸತತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಂಗ್ಳೂರು ವಿನಾಯಕ ಟಾಕೀಸ್ ಬಳಿ ಸಂಘದ ಸ್ವಂತ ಕಟ್ಟಡ ನಿರ್ಮಾಣಗೊಂಡ ಅನಂತರ ಶಿಕ್ಷಣ, ಸಂಗೀತ, ನಾಟಕ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಚಟುವಟಿಕೆ ನಡೆಸುವ ಕೇಂದ್ರವನ್ನಾಗಿ ರೂಪಿಸಿದ್ದರು.ಅಂಗನವಾಡಿ ಶಿಶು ಮಂದಿರ, ಗ್ರಂಥಾಲಯವನ್ನು ರಚನೆ ಮಾಡಿದ್ದರು. ಇವರು ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕ್ರತರಾಗಿದ್ದು ಇವರು ಬರೆದು ಪ್ರಕಟಿಸಿದ ಆತ್ಮವೃತ್ತಾಂತ ನಾನಾರೆಂಬುದು ನಾನಲ್ಲ’ ಜನಪ್ರಿಯವಾಗಿತ್ತು.ಇವರು ಯಾವಾಗಲೂ ಶ್ವೇತ ವಸ್ತ್ರಧಾರಿಯಾಗಿರುತ್ತಿದ್ದರು