ಕುಂದಾಪುರ : 1,300 ಕಿಲೋಮೀಟರ್ ದೂರವನ್ನು ಬೈಕಿನಲ್ಲಿ ಕ್ರಮಿಸಿ ಚೀನಾ ಗಡಿ ಸಮೀಪದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯದ ದಿನದಂದು ಧ್ವಜಾರೋಹಣ ಮಾಡುವ ಮೂಲಕ ಕುಂದಾಪುರದ ಮಹಿಳೆಯೊಬ್ಬರು ವಿಶಿಷ್ಟ ಸಾಹಸಮಯ ಸಾಧನೆ ಮೆರೆದಿದ್ದಾರೆ.
57ರ ಹರೆಯದ ಕುಂದಾಪುರದ ಚಿಕ್ಕನಸಾಲು ರಸ್ತೆಯ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಲ್ಮಾ ಕ್ರಾಸ್ತಾ ಕರ್ವಾಲೋ ಅವರೇ ಈ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ
ಅವರು ಈ ಹಿಂದೆ ತನ್ನ ಮಗಳು ಚೆರಿಶ್ ಕರ್ವಾಲೋ ಜತೆಗೂಡಿ ಬೈಕ್‌ನಲ್ಲಿ ಜಗತ್ತಿನ ಅತೀ ಎತ್ತರದ ಪ್ರದೇಶವಾದ ಉಮ್ಲಿಂಗ್ ಪಾಸ್‌ಗೆ ತೆರಳುವ ಮೂಲಕ ಗಮನ ಸೆಳೆದಿದ್ದರು

ವಿಲ್ಮಾ ಕ್ರಾಸ್ತಾ ಕರ್ವಾಲೋ ಇವರು 8 ದಿನಗಳಲ್ಲಿ 1300 ಕಿ.ಮೀ. ದೂರವನ್ನು ಕ್ರಮಿಸಿದ್ದರು ಕಾರ್ಪೋರೇಟರ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿರುವ ಇವರು ಬೈಕ್ ನಲ್ಲಿ ಹಿಮಾಲಯ ಪರ್ವತದ ಹಾದಿಯಲ್ಲಿ ಪ್ರಯಾಣ ಮಾಡುವ ಹವ್ಯಾಸ ಹೊಂದಿದ್ದಾರೆ
ಪ್ರಯಾಣ ತುಂಬಾ ಕಠಿಣವಾಗಿದ್ದು ಲೇಹ್‌ನಿಂದ ಝನ್ಸ್ಕರ್ ಕಣಿವೆ ಮೂಲಕ ಕಾರ್ಗಿಲ್ ಸಮೀಪದ ಗುರ್ಖೋನ್ ಕಣಿವೆ ಆಗಿ ಸಿಯಾಚಿನ್ ತಲುಪಿದ್ದೇವೆ. ಗುರಿ ತಲುಪಲು 60ಕಿ.ಮೀ. ಇರುವಾಗಲೇ ಪ್ರಯಾಣ ನಿಲ್ಲಿಸುವ ಮನಸ್ಸು ಮಾಡಿದ್ದೇವು. ಆದರೆ ಹಠ ಹಿಡಿದು ಈ ಯಾತ್ರೆ ಪೂರ್ಣಗೊಳಿಸಿದ್ದೇವೆ. ಇದರಿಂದ ನಮಗೆ ತುಂಬ ಖುಷಿಯಾಗಿದೆ ಎಂದು ಅವರು ಪ್ರತಿಕ್ರೀಯಿಸಿದ್ದಾರೆ

