ಉಡುಪಿ : ಸಮೀಪದ ಶಿವಳ್ಳಿ ಗ್ರಾಮದ ಅಂಬಾಗಿಲು-ಪೆರಂಪಳ್ಳಿ ಜಂಕ್ಷನ್ ಬಳಿ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯಕ್ಷಗಾನ ಕಲಾವಿದರಾದ ಪ್ರಭಾಕರ್ ಆಚಾರ್ಯ (62 ವರ್ಷ) ರವರು ಸ್ಥಳದಲ್ಲೇ ಮ್ರತಪಟ್ಟಿದ್ದು ಸಹ ಸವಾರ ಸತೀಶ್ ಎಂಬವರನ್ನು ಉಡುಪಿಯ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಅಂಬಾಗಿಲು ಕಡೆಯಿಂದ ಕಲ್ಸಂಕ ಕಡೆಗೆ ವಾಹನಗಳು ಏಕಮುಖವಾಗಿ ಸಂಚರಿಸುವ ರಸ್ತೆಯಲ್ಲಿ ಟಿಪ್ಪರ್ ಚಾಲಕ ಸಂತೋಷ್ ಎಂಬಾತನು ಟಿಪ್ಪರನ್ನು ಅಂಬಾಗಿಲು ಕಡೆಯಿಂದ ದುಡುಕು ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಏಕಾಎಕಿಯಾಗಿ ಪೆರಂಪಳ್ಳಿ ಕಡೆಗೆ ಒಮ್ಮೆಲೆ ತಿರುಗಿಸಿದರ ಪರಿಣಾಮ ಅದೇ ರಸ್ತೆಯಲ್ಲಿ ಮುಂದುಗಡೆಯಿಂದ ತೆರಳುತ್ತಿದ್ದ ಬೈಕ್ ಸವಾರ ಪ್ರಭಾಕರ ಆಚಾರ್ಯರವರ ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದು, ಬೈಕ್ ಸವಾರ ಪ್ರಭಾಕರ ಆಚಾರ್ಯರವರು ಟಿಪ್ಪರಿನ ಹಿಂದುಗಡೆಯ ಎಡಬದಿಯ ಟಯರಿನ ಅಡಿಗೆ ಬಿದ್ದು, ತಲೆಗೆ , ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು ಸಹ ಸವಾರ ಸತೀಶ್ ರವರಿಗೆ ಕೂಡಾ ಬಲಬದಿ ಸೊಂಟದ ಬಳಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಪರೀಕ್ಷೀಸಿದ ವೈದ್ಯಾಧಿಕಾರಿಗಳು ಗಾಯಾಳು ಪ್ರಭಾಕರ ಆಚಾರ್ಯರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಗಂಭೀರವಾಗಿ ಗಾಯಗೊಂಡ ಸತೀಶ್ ಎಂಬವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಟಪಾಡಿ ಪ್ರಭಾಕರ ಆಚಾರ್ಯರವರ ನಿಧನದಿಂದ ಯಕ್ಷಲೋಕದಲ್ಲಿ ಕರಾಳ ಛಾಯೆ ಆವರಿಸಿದೆ

