Home » ಅಸಿಸ್ಟೆಂಟ್ ಜೈಲರ್ ಮೇಲೆ ಕೈದಿಗಳು ಹಲ್ಲೆ
 

ಅಸಿಸ್ಟೆಂಟ್ ಜೈಲರ್ ಮೇಲೆ ಕೈದಿಗಳು ಹಲ್ಲೆ

by Kundapur Xpress
Spread the love

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಸಿಸ್ಟೆಂಟ್ ಜೈಲರ್ ಮೇಲೆ ಕೈದಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಶಿಕ್ಷಾ ಬಂಧಿಗಳಾದ ಆನಂದ (1489) ಮತ್ತು ಅಬ್ದುಲ್ ಘನಿ (18589) ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಇಬ್ಬರು ಸೇರಿ ಅನಾವಶ್ಯಕವಾಗಿ ಶಿಕ್ಷಾ ಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದರು. ಇದನ್ನು ಅಸಿಸ್ಟೆಂಟ್ ಜೈಲರ್ ತಡೆಯಲು ಮುಂದಾದಾಗ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜ.7 ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜ.17 ರಂದು ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related Articles

error: Content is protected !!