Home » ಟ್ರಕ್ಕಿಂಗ್ ಬಂದಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ
 

ಟ್ರಕ್ಕಿಂಗ್ ಬಂದಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ

by Kundapur Xpress
Spread the love

ಮೂಡುಬಿದಿರೆ: ಇಲ್ಲಿಯ ಕೊಣಾಜೆಕಲ್ಲು ಪ್ರವಾಸಿ ತಾಣಕ್ಕೆ ಟ್ರಕ್ಕಿಂಗ್ ಬಂದಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಮೂಲದ ಮನೋಜ್ ಎನ್. (25) ಮೃತ ಯುವಕ.

ಮನೋಜ್ ಟ್ರಕ್ಕಿಂಗಿಗೆ ತನ್ನ ಸ್ನೇಹಿತನೊಂದಿಗೆ ಬಂದಿದ್ದು, ಕೊಣಾಜೆಕಲ್ಲು ಪ್ರದೇಶದ ಎತ್ತರದ ಸ್ಥಳಕ್ಕೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿತು ಎನ್ನಲಾಗಿದೆ. ಗುಡ್ಡದಲ್ಲೇ ಕುಳಿತುಕೊಂಡ ಸಂದರ್ಭದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಹಪಾಠಿ ಉಪಚರಿಸಲು ಯತ್ನಿಸಿದ್ದರೂ ಕೂಡ ಮನೋಜ್ ಮೃತಪಟ್ಟರು ಎನ್ನಲಾಗಿದೆ.

 

Related Articles

error: Content is protected !!