33
ಗಂಗೊಳ್ಳಿ: ಪ್ರತಿದಿನದಂತೆ ಮೀನು ಮಾರಾಟ ಮಾಡಲು ಗಂಗೊಳ್ಳಿಯಿಂದ ಮೀನು ತೆಗೆದುಕೊಂಡು ಬಸ್ಸಿನಲ್ಲಿ ಕುಂದಾಪುರದ ಕಡೆಗೆ ಬರುತ್ತಿದ್ದ ಮೀನುಗಾರ ಮಹಿಳೆ ಪದ್ಮಾವತಿ (67) ಶಾಸ್ತ್ರಿ ಪಾರ್ಕ್ ಸಮೀಪ ಬಸ್ಸಿನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಸ್ಸಿನಲ್ಲಿದ್ದ ಸ್ಥಳೀಯರು ಸೇರಿ ತಕ್ಷಣ ಪದ್ಮಾವತಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

