ಕುಂದಾಪುರ : ಕುಂದಾಪುರ ತಾಲೋಕಿನ ಸಿದ್ದಾಪುರದ ಪೇಟೆಯ ಮುಖ್ಯ ರಸ್ತೆಯಲ್ಲಿರುವ ರಾಮಾನಾಥ ಅಟೋ ಸ್ಪೇರ್ ಹಾಗೂ ನಂದಿನಿ ಹಾಲಿನ ಅಂಗಡಿಗೆ ಬೆಂಕಿ ತಗುಲಿ ಸುಮಾರು 40 ಲಕ್ಷಕ್ಕೂ ಹೆಚ್ಚಿನ ನಷ್ಟ ಉಂಟಾದ ಘಟನೆ ನಿನ್ನೆ ರಾತ್ರಿ 11.30ರ ಸುಮಾರಿಗೆ ಸಿದ್ದಾಪುರದಲ್ಲಿ ನಡೆದಿದೆ
ಎಸ್ ರಾಧಾಕೃಷ್ಣ ಶೆಣೈಯವರ ಮಾಲಕತ್ವದ ರಾಮಾನಾಥ ಅಟೋ ಸ್ಪೇರ್ ಅಂಗಡಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ದ್ವಿಚಕ್ರ ವಾಹನದ ಬಿಡಿ ಭಾಗಗಳು ಸೇರಿದಂತೆ ದ್ವಿಚಕ್ರ ವಾಹನದ ಟಯರ್ ಹಾಗೂ ಆಯಿಲ್ ಡಬ್ಬಗಳ ಹೋಲ್ ಸೇಲ್ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ ಅಂದಾಜು 25 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ
ಪಕ್ಕದಲ್ಲಿದ್ದ ಜಾಂಬೂರು ಅಮೃತ್ ರಾಜ್ ಮಾಲಕತ್ವದ ನಂದಿನಿ ಹಾಲಿನ ಅಂಗಡಿಗೆ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ತುಪ್ಪದ ಪ್ಯಾಕೇಟ್ ಪಾನೀಯ ಸೇರಿದಂತೆ ನಂದಿನಿಯ ಇನ್ನೀತರ ಸಹ ಉತ್ಪನ್ನಗಳನ್ನು ಇರಿಸಿದ್ದ 5 ಫ್ರಿಡ್ಜ್ ಗಳು ಬೆಂಕಿಗೆ ಆಹುತಿಯಾಗಿದ್ದು ಅಂದಾಜು ಮೌಲ್ಯ 15 ಲಕ್ಷಕ್ಕೂ ಮಿಕ್ಕಿ ನಷ್ಡ ಉಂಟಾಗಿದೆಯೆಂದು ಅಂದಾಜಿಸಲಾಗಿದೆ
ರಾತ್ರಿ 12.00 ಗಂಟೆಯ ಸುಮಾರಿಗೆ 500ಕ್ಕೂ ಮಿಕ್ಕಿ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿಸಿದರೂ ಕುಂದಾಪುರದ ಕೋಣಿಯಿಂದ ಸಿದ್ದಾಪುರಕ್ಕೆ ತೆರಳಲು ಸಮಯ ತೆಗೆದುಕೊಂಡಿದ್ದರಿಂದ ಬೆಂಕಿ ಮತ್ತಷ್ಟು ಉದ್ವಿಘ್ನವಾಯಿತು ಅಗ್ನಿಶಾಮಕ ಸಿಬ್ಬಂದಿ ಹಾಗೂ 500 ಜನ ಸ್ಥಳೀಯರ ಸಹಕಾರದಿಂದ ಬೆಳಗ್ಗಿನ ಜಾವ 4.00 ಗಂಟೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು
ಫೋಟೋ : ಪ್ರಭಾ ಸ್ಟುಡಿಯೋ ಸಿದ್ದಾಪುರ

