385
ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಇಂದು ಮಂಗಳವಾರ ಮುಂಜಾನೆ ಭಾರೀ ಭೂಕುಸಿತ ಉಂಟಾಗಿ 6 ಮಂದಿ ಸಾವನ್ನಪ್ಪಿದ್ದು,ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ತೊಂದರೆಗೀಡಾಗಿರುವ ಪ್ರದೇಶಗಳಿಗೆ ಅಗ್ನಿ ಶಾಮಕ ದಳ ಮತ್ತು ರಾಷ್ಟ್ರೀಯ ವಿಕೋಪ ಪರಿಹಾರ ಸ್ಪಂದನೆ ಪಡೆ (ಎನ್ ಡಿಆರ್ ಎಫ್) ತಂಡಗಳನ್ನು ನಿಯೋಜಿಸಲಾಗಿದ್ದು
ಹೆಚ್ಚುವರಿ ಎನ್ ಡಿಆರ್ ಎಫ್ ತಂಡವನ್ನೂ ಕಳುಹಿಸಿಕೊಡಲಾಗುತ್ತಿದೆ ಎಂದು ಕೇರಳ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರ ಹೇಳಿದೆ. ಭಾರೀ ಮಳೆಯಾಗುತ್ತಿರುವುದು ಪರಿಹಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ

