Home » ಅಕ್ರಮ ಗಣಿಗಾರಿಕೆ : ಪ್ರಕರಣ ದಾಖಲು
 

ಅಕ್ರಮ ಗಣಿಗಾರಿಕೆ : ಪ್ರಕರಣ ದಾಖಲು

by Kundapur Xpress
Spread the love

ಕಾರ್ಕಳ : ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಕ್ಕೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆಪಾದಿತರಾದ ರಮೇಶ್‌ ಶೆಟ್ಟಿ, ರಾಜೇಶ, ರಾಜ, ದುರ್ಗೇಶ, ಗೋಪಾ ನಾಯರ್, ಶಿವರಾಜ್, ಸುಬ್ರಹ್ಮಣ್ಯ, ರವಿ, ಚೆಲುವ, ರವಿ, ಚಿನ್ನು, ರಾಜ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸ್‌ ಉಪನಿರೀಕ್ಷಕ ಮುರಳೀಧರ ನಾಯ್ಕ್‌ ಸಿಬ್ಬಂದಿಯೊಂದಿಗೆ ಸರ್ವೇ ನಂಬ್ರ 245ರ ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿನ ಕಲ್ಲುಕೋರೆ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ.ಸ್ಥಳ ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿರುತ್ತದೆ.

 

Related Articles

error: Content is protected !!