Home » ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದ ಬ್ರಹ್ಮಾವರ ಪೊಲೀಸರು
 

ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದ ಬ್ರಹ್ಮಾವರ ಪೊಲೀಸರು

by Kundapur Xpress
Spread the love

ಉಡುಪಿ : ಬಾರ್ಕೂರು ಪರಿಸರದ ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಕೇರಳ ಮೂಲದ ಪಡುಕರೆ ನಿವಾಸಿ ಪ್ರವೀಣ್‌ ಬಂಧಿತ ಆರೋಪಿ

ಬಾರ್ಕೂರು ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ಸಂಚುಬದ್ಧವಾಗಿ ಕಳ್ಳತನ ನಡೆದಿತ್ತು. ಕಳ್ಳ ಯಾವುದೇ ಕುರುಹು ಸಿಗದಂತೆ ಮನೆಗೆ ನುಗ್ಗಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ತೆರಳಿದ್ದರಿಂದ ಪ್ರಕರಣವು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರಂಭಿಕ ಹಂತದಲ್ಲಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸ್ಪಷ್ಟ ಸುಳಿವು ದೊರಕಿರಲಿಲ್ಲ.

ಬ್ರಹ್ಮಾವರ ಪೊಲೀಸ್ ತಂಡ ಸಂಶಯಾಸ್ಪದ ಚಲನವಲನಗಳನ್ನು ಪರಿಶೀಲಿಸಿ, ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

Related Articles

error: Content is protected !!