Home » ದೋಣಿ ಮಗುಚಿ ಕಡಲು ಪಾಲಾದವರ ರಕ್ಷಣೆ
 

ದೋಣಿ ಮಗುಚಿ ಕಡಲು ಪಾಲಾದವರ ರಕ್ಷಣೆ

by Kundapur Xpress
Spread the love

ಕಾಪು : ಸಮುದ್ರದ ಅಲೆಗಳ ಹೊಡೆತಕ್ಕೆ ನಾಡದೋಣಿ ಬೀಟ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯು ಮಗುಚಿ ಬಿದ್ದಿದ್ದು, ಮೀನುಗಾರರು ಕಡಲು ಪಾಲಾಗಿದ್ದು, ಎಲ್ಲಾ ಮೀನುಗಾರರನ್ನು ರಕ್ಷಿಸಿ ಜಿಲ್ಲೆಯಲ್ಲಿ ಸಂಭಾವ್ಯ ಮತ್ತೊಂದು ಪ್ರಾಣಾಪಾಯದಂತಹ ಘೋರ ದುರಂತ ತಪ್ಪಿದ ಘಟನೆ ನಡೆದಿದೆ

ಮಲ್ಲೆಯ 7 ಜನರ ಮೀನುಗಾರರ ತಂಡವು ಕಾಪು ಪಡು ಗ್ರಾಮದ ಲೈಟ್ ಹೌಸ್ ಬೀಚ್‌ನ ಬಳಿ ಬರುತ್ತಿರುವಾಗ ಜೋರಾಗಿ ಬೀಸಿದ ರಭಸದ ಗಾಳಿಯಿಂದಾಗಿ ಅವರ ದೋಣಿ ಮಗುಚಿಬಿದ್ದಿತ್ತು. ದಡದ ಹತ್ತಿರ ದುರ್ಘಟನೆ ಸಂಭವಿಸಿದ್ದು, ರಕ್ಷಣೆಗಾಗಿ ಮೊರೆ ಇಟ್ಟಾಗ ಸ್ಥಳೀಯರು ತಮ್ಮ ಜೀವದ ಹಂಗು ತೊರೆದು ಕಡಲಿಗೆ ಇಳಿದು ಏಳೂ ಮಂದಿ ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರಲಾಗಿದೆ.

 

Related Articles

error: Content is protected !!