Home » ಮಲ್ಪೆ ಬಂದರಿನಲ್ಲಿ ಕಾಲುಜಾರಿ ನೀರಿಗೆ ಬಿದ್ದ ಯುವಕನನ್ನು ರಕ್ಷಿಣೆ
 

ಮಲ್ಪೆ ಬಂದರಿನಲ್ಲಿ ಕಾಲುಜಾರಿ ನೀರಿಗೆ ಬಿದ್ದ ಯುವಕನನ್ನು ರಕ್ಷಿಣೆ

by Kundapur Xpress
Spread the love

ಉಡುಪಿ: ಮಲ್ಪೆ ಬಂದರಿನಲ್ಲಿ ಕಾಲುಜಾರಿ ನೀರಿಗೆ ಬಿದ್ದ ಯುವಕನನ್ನು ರಕ್ಷಿಸಲಾಗಿದೆ. ಇಲ್ಲಿ ಬೋಟುಗಳನ್ನು ಲಂಗರು ಹಾಕುವ ಪ್ರದೇಶದಲ್ಲಿ, ಈ ದುರ್ಘಟನೆ ಸಂಭವಿಸಿತ್ತು. ಎರಡು ಬೋಟುಗಳ ನಡುವಿನ ಇಕ್ಕಟ್ಟಿನಲ್ಲಿ ಯುವಕನೊಬ್ಬ ಹಿನ್ನೀರು ಪ್ರದೇಶದಲ್ಲಿ ಕುಸಿದು ಬಿದ್ದಿದ್ದ. ಅಪಾರ ಪ್ರಮಾಣದಲ್ಲಿ ಹೂಳು ತುಂಬಿರುವ ಈ ಪ್ರದೇಶದಲ್ಲಿ ಒಂದು ಬಾರಿ ನೀರಿಗೆ ಬಿದ್ದರೆ ಬದುಕಿ ಬರುವುದೇ ಕಷ್ಟ. ಯುವಕ ಕಾಲು ಜಾರಿ ಬೀಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಈಜುಪಟು ಈಶ್ವರ ಮಲ್ಪೆ, ಹರಸಹಸಪಟ್ಟು ಯುವಕನನ್ನು ಮೇಲಕ್ಕೆತ್ತಿದ್ದಾರೆ. ಅಪಾಯಕಾರಿ ಹೂಳಿನಲ್ಲಿ ಹೂತು ಹೋದರೆ ಮತ್ತೆ ಮೇಲಕ್ಕೆ ಬರುವುದು ಕಷ್ಟ. ಇಷ್ಟಾಗಿಯೂ ಈಶ್ವರ ಮಲ್ಪೆ ಮತ್ತು ತಂಡದವರು ಸಾಹಸ ಮೆರೆದು ಯುವಕನನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ

 

Related Articles

error: Content is protected !!