284
ಉಡುಪಿ : ಶಿರ್ವಾದ ಸಾಲ್ಮಾರ ಬಳಿಯ ಶಿರ್ವ-ಬೆಳ್ಮಣ್ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ
ಮೃತಪಟ್ಟವರನ್ನು ಕಾಪು ನಿವಾಸಿಯಾದ ಶಂಕರ್ ಆಚಾರ್ಯ (51ವರ್ಷ) ಎಂದು ಗುರುತಿಸಲಾಗಿದೆ ಗಂಭೀರ ಗಾಯಗೊಂಡ ಕರುಣಾಕರ ಮೂಲ್ಯ ಎಂಬವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

