ಕುಂದಾಪುರ : ಕಾಂತಾರ-2 ಸಿನಿಮಾ ಚಿತ್ರೀಕರಣದ ಮಧ್ಯೆಯೇ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಸಂಜೆ ಆಗಮಿಸಿ ಮತದಾನ ಮಾಡಿದರು. ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕಾಗಿ, ನಾನು ದೇಶಕ್ಕಾಗಿ ಮತ ಹಾಕಿದ್ದೇನೆ ಮತದಾನ ನಮ್ಮ ಹಕ್ಕಾಗಿರುವುದರಿಂದಅದನ್ನು ಜವಾಬ್ದಾರಿಯಿಂದ ಚಲಾಯಿಸಿದ್ದೇನೆ. ಬೆಳಗ್ಗೆ ಮತಗಟ್ಟೆಯಲ್ಲಿ ಜಾಸ್ತಿ ಜನ ಇರುತ್ತಾರೆ ಎನ್ನುವ ಕಾರಣಕ್ಕಾಗಿ ಮಧ್ಯಾಹ್ನದ ಬಳಿಕ ಬಂದಿದ್ದೇನೆ.ಸರ್ಕಾರದ ನಿರೀಕ್ಷೆ ಹಾಗೂ ರಾಜಕೀಯದಬಗ್ಗೆ ಮಾತನಾಡಲ್ಲ.ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಎಂದರು
ನಾನು ಓದಿದ, ಆಟವಾಡಿದ ಶಾಲೆಯಲ್ಲೇ ಮತದಾನ ಮಾಡಿರುವ ಬಗ್ಗೆ ಖುಷಿ ಇದೆ. ಶಾಲೆಯನ್ನು ದತ್ತು ಸ್ವೀಕರಿಸಲಾಗಿದ್ದು, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಕ್ರೀಡಾಂಗಣವನ್ನು ವಿಸ್ತಾರ ಮಾಡಲಾಗಿದೆ. ಚುನಾವಣೆಗಳು ಪ್ರಾರಂಭವಾಗಿದ್ದರಿಂದಾಗಿ ಪೂರ್ತಿ ಕೆಲಸ ಮಾಡಲು ಆಗಲಿಲ್ಲ. ಕಟ್ಟಡ, ಪೀಠೋಪಕರಣ ಸೇರಿದಂತೆ ಶಾಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸಗಳು ಆಗಬೇಕಾಗಿದೆ ಎಂದರು.