Home » ಕೋಡಿ : ಅಂಗನವಾಡಿ ಪ್ರಾರಂಭೋತ್ಸವ
 

ಕೋಡಿ : ಅಂಗನವಾಡಿ ಪ್ರಾರಂಭೋತ್ಸವ

by Kundapur Xpress
Spread the love

ಕೋಟ: ಅಂಗನವಾಡಿ ಪ್ರಾರಂಭೋತ್ಸವದ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಡಿ ಗ್ರಾ.ಪಂ ವ್ಯಾಪ್ತಿಯ ಹೊಸಬೇಂಗ್ರೆ ಅಂಗನವಾಡಿಯಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಮಕ್ಕಳನ್ನು ವೈಭವಪೂರಿತವಾಗಿ ಸ್ವಾಗತಿಸಿಕೊಳ್ಳಲಾಯಿತು.
ಗುರುವಾರ ಅಂಗನವಾಡಿಯಲ್ಲಿ ಕೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಕಾರ್ವಿ ಪರಿಸರಸ್ನೇಹಿ ಗಿಡ ನಡಯವ ಮೂಲಕ ಅಂಗನವಾಡಿ ಕಾರ್ಯಕರ್ತೆ ಯಮುನ ಎಲ್ ಕುಂದರ್ ಮಕ್ಕಳಿಗೆ ಬಲೂನ್ ನೀಡಿ ಕುಣಿದು ಪುಟಾಣಿಗಳನ್ನು ಸ್ವಾಗತಿಸಿಕೊಂಡರು.
ಮಕ್ಕಳ ಪೋಷಕರು ಪುಟಾಣಿಗಳಿಗೆ ಪುಷ್ಭ ಸಿಂಚನಗೈದು ಆರತಿ ಬೆಳಗಿ ಅಂಗನವಾಡಿಯ ಒಳಗೆ ಬರಮಾಡಿಕೊಂಡರು.
ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಹಾಗೂ ಬ್ರಹ್ಮಾವರ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ ಪೋಷಕರಿಗೆ ಗಿಡ ವಿತರಿಸಿ ಪುಟಾಣಿಗಳಿಗೆ ಪರಿಸರ ಜಾಗೃತಿ ಮೊಳಗಿಸಿದರು.
ಸರಳ ಸಮಾರಂಭದ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಗಿಡಕ್ಕೆ ನೀರೆರೆದು ದೀಪ ಬೆಳಗಿಸಿ ಉದ್ಘಾಟಿಸಿದರು.

ಪೋಷಕರಿಗೆ ಸಂದೇಶ
ಮಕ್ಕಳನ್ನು ಸುಸಂಸ್ಕೃತವಾಗಿಸಲು ಅಂಗನವಾಡಿ ಎಷ್ಟು ಪ್ರಾಮುಖ್ಯತೆಯೋ ಅದೇ ರೀತಿ ಮೊದಲ ಪಾಠಶಾಲೆ ಮನೆಯಲ್ಲಿ ಸಂಸ್ಕಾರದ ಬೀಜ ಬಿತ್ತಬೇಕು,ಪ್ರಸ್ತುತ ತಾಪಮಾನದಲ್ಲಿ ಪರಿಸರವನ್ನು ಪ್ರೀತಿಸುವ ಅದರ ಉಳಿವಿನ ಬಗ್ಗೆ ಪ್ರತಿಯೊಬ್ಬರು ಪಣತೊಡಬೇಕು.ಮಕ್ಕಳಿಗೆ ಮೊಬೈಲ್ ವ್ಯಾಮೂಹದಿಂದ ದೂರ ಇರಿಸಿ ಎಂದು ಕರೆ ಇತ್ತರು.
ಬಾಲವಿಕಾಸ ಸಮಿತಿ ಸದಸ್ಯೆ ನಿರ್ಮಲ,ಸಮನ್ವಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೀಪಾ ಆರ್ ಕಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸ್ಥಳೀಯರಾದ ಸುಜಾತ,ಸುಮತಿ,ಜ್ಯೋತಿ ಸಹರಕರಿಸಿದರು

 

Related Articles

error: Content is protected !!