ಕುಂದಾಪುರ : ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪೊಳ್ಳು ಭರವಸೆಯ ಮೂಲಕ ಗ್ಯಾರೆಂಟಿ ಕಾರ್ಡ್ ಗಳನ್ನು ಮನೆ ಮನೆಗೆ ಹಂಚಿ ಮತದಾರರ ದಾರಿತಪ್ಪಿಸಿ ಉಚಿತ ಖಚಿತ ಖಂಡಿತ ನಿಶ್ಚಿತ ಎಂದು ಬೊಬ್ಬೆರಿದ ಕಾಂಗ್ರೆಸ್ ಮುಖಂಡರು ಇದೀಗ ಐದು ಗ್ಯಾರಂಟಿಗಳನ್ನು ಯಥವತ್ತಾಗಿ ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ಕಂಗೆಟ್ಟಿದ್ದಾರೆ ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡುತ್ತೇವೆ ಎಂದು ಪುಂಗಿ ಊದುತ್ತಾ ಬಂದಿರುವ ಕಾಂಗ್ರೆಸ್ ಮುಖಂಡರು ಇದೀಗ ಬಿನ್ನ ರಾಗ ಹಿಡಿಯುತ್ತಿರುವುದು ತೀವ್ರ ಸಂಶಯಕ್ಕೆ ಎಡ ಮಾಡಿದೆ ಕಾಂಗ್ರೆಸ್ ಮುಖಂಡರು ನೀಡಿದ 5 ಗ್ಯಾರಂಟಿಗಳನ್ನು ಕೂಡಲೇ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ ಯವರು ಸರಕಾರವನ್ನು ಆಗ್ರಹಿಸಿದ್ದಾರೆ