ಸಂತಸ ಬಂದಾಗ ನಾನು ನೆನಪಾಗಲಿಲ್ಲ. ಹಣ ಬಂದಾಗ ನಾನು ನೆನಪಾಗಲಿಲ್ಲ . ಸಂತಸದ ಆ ಕ್ಷಣಗಳಲ್ಲಿ ತೇಲಿದ್ದೇ ತೇಲಿದ್ದು. ಸಂತಸ ಕ್ಷಣಿಕ ಎಂಬುದೇ ಗೊತ್ತಾಗಲಿಲ್ಲ . ಪೂರ್ವ ಜನ್ಮದ ಕರ್ಮ ಈ ಜನ್ಮದ ಕರ್ಮ ಒಟ್ಟಿಗೆ ಸೇರಿ ಕಷ್ಟದ ಮೇಲೆ ಕಷ್ಟ ಬಂದಾಗ ನೆನಪಾಗಿದ್ದು ನಾನು . ಸಂತಸ ಬಂದಾಗ ಇಲ್ಲದ ಭಕ್ತಿ ಕಷ್ಟ ಬಂದಾಗ ನೆನಪಾಯಿತು . ಹಿರಿಯರು ಮಾಡಿದ ಗಾದೆಯು ಸರಿ ಇದೆ ಅಲ್ಲವೇ ? ಕಷ್ಟ ಬಂದಾಗ ವೆಂಕಟರಮಣ ಎಂದು . ಕಷ್ಟ ಬಂದಾಗ ಭಕ್ತಿಯಿಂದ ನನ್ನಲ್ಲಿಗೆ ಬಂದು ಕೈ ಮುಗಿದು ಬೇಡಿಕೊಳ್ಳುವ ಆ ಭಕ್ತಿ ಸಂತಸ ಬಂದಾಗ ಯಾಕಿರಲ್ಲ ? ಅಹಂಕಾರ ಮದವೇರಿದಾಗ ಮನುಷ್ಯತ್ವ ನಶಿಸಿದಾಗ ಇಳಿಸಲು ನಾನೇ ಬರಬೇಕು . ಮಕ್ಕಳೇ ಇಲ್ಲ ಅಂದಾಗ ತಂದೆ ತಾಯಿಗಳು ನನ್ನಲ್ಲಿಗೆ ಬಂದು ಭಕ್ತಿಯಿಂದ ಬೇಡಿದಾಗ ಪಡೆದಂತ ಪುಣ್ಯಾತ್ಮನು ನೀನು . ನೀನು ಚಿಕ್ಕವನಿದ್ದಾಗ ರೋಗದಿಂದ ಬಳಲುತ್ತಿದ್ದಾಗ ಆ ಮಾತೆ ನನ್ನಲ್ಲಿಗೆ ಬಂದು ಹರಕೆ ಹೊತ್ತಾಗ ಉಳಿದವನು ನೀನು . ನೀನು ದೊಡ್ಡವನಾದೆ ಆದರೆ ನಿನ್ನನ್ನು ಸಲಹೆದ ತಂದೆ ತಾಯಿಯರನ್ನು ಹೊರ ದಬ್ಬಿದೆ . ನಿನಗೆ ಮತ್ತೆ ಕಷ್ಟ ಬಂದಾಗ ನನ್ನಲ್ಲಿಗೆ ಬರುವೆ . ಜನ್ಮದ ಋಣ ಬಂದಾಗ ತಂದೆ ತಾಯಿ, ಗುರು , ಕಲ್ಪವೃಕ್ಷ ಮತ್ತು ಗೋಮಾತೆ ಋಣವನ್ನು ಜೀವನವಿಡಿ ಸವೆಸಿದರು ತೀರಿಸಲು ಸಾಧ್ಯವಿಲ್ಲ . ನಿನ್ನ ಋಣ ಹಾಗಿರಲಿ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡಿದ್ದರೆ ಪುಣ್ಯ ಸಂಪಾದಿಸುತ್ತಿದ್ದೆ . ಆದ್ರೆ ನಿನ್ನ ಪುಣ್ಯ ಬಿಡು, ನಿನ್ನ ಪ್ರಾರಬ್ಧ ಕರ್ಮ ಮುಂದಿನ ಜನುಮಕ್ಕು ತೆಗೆದುಕೊಂಡು ಹೋಗುವೆ . ಜೀವನವಿರುವುದು ಎಷ್ಟು ದಿನ ಗೊತ್ತಿಲ್ಲ . ನಿನ್ನ ಸಾವು ಹೆಂಗೆ ಎಲ್ಲಿ ಎಂಬ ಅರಿವೇ ನಿನಗಿರುವುದಿಲ್ಲ . ಅರಿತುಕೋ ಮನುಜ ಸದಾಕಾಲ ತಗ್ಗಿ ಬಗ್ಗಿ ನಡೆ ಜೀವನ ಹಸನಾದೀತು.
ಪ್ರದೀಪ್ ಕುಮಾರ್ ಕೋಮುಂಜೆ

