ಉಡುಪಿ : ಆಯೋಧ್ಯ ಶ್ರೀ ರಾಮ ಮಂದಿರ ಪ್ರತಿಷ್ಠಾ ಅಭಿಯಾನದ ಪ್ರಯುಕ್ತ ಉಡುಪಿ ಜಿಲ್ಲೆಯ ಹಿರಿಯಡಕ ತಾಲೂಕಿನ ಮನೆ ಮನೆ ಸಂಪರ್ಕ ಅಭಿಯಾನದ ಪೂರ್ವಭಾವಿ ಸಮಾವೇಶವು ಹಿರಿಯಡಕದ ಓಂತಿಬೆಟ್ಟು ಆರ್.ಎಸ್.ಬಿ. ಸಭಾಭವನದಲ್ಲಿ ನಡೆಯಿತು.
ಸಮಾವೇಶದಲ್ಲಿ ಹಿರಿಯಡಕ ತಾಲೂಕಿನ ಎಲ್ಲಾ ಗ್ರಾಮ, ಉಪ ವಸತಿಗಳಿಗೆ ಪವಿತ್ರ ಮಂತ್ರಾಕ್ಷತೆ ತಲುಪಿಸಲು ಮನೆ ಮನೆ ಸಂಪರ್ಕದ ತಂಡಗಳ ರಚನೆ ಮಾಡಲಾಯಿತು. ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಆಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಗ್ರಾಮ ಪ್ರಮುಖರಿಗೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.
ಜ.22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ದೇವರ ಪ್ರಾಣಪ್ರತಿಷ್ಠಾಪನೆಯ ಪುಣ್ಯ ಸಂದರ್ಭದಲ್ಲಿ ಎಲ್ಲ ಹಿಂದುಗಳ ಮನೆಗೂ ಶ್ರೀದೇವರ ಮಂತ್ರಾಕ್ಷತೆಯನ್ನು ತಲುಪಿಸುವ ಹಾಗೂ ಸಂಭ್ರಮಾಚರಣೆ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ಶ್ರೀ ರಾಮ ಪ್ರತಿಷ್ಠಾ ಅಭಿಯಾನದ ಉಡುಪಿ ಜಿಲ್ಲಾ ಸಂಯೋಜಕ ಸುರೇಶ್ ಹೆಜಮಾಡಿ, ಸಹ ಸಂಚಾಲಕ ಸುಧೀರ್ ನಿಟ್ಟೆ, ಎಂಐಟಿ ಉಪನ್ಯಾಸಕ ಗೋಪಿನಾಥ ನಾಯಕ್ ಪಳ್ಳಿ, ಶ್ರೀ ರಾಮ ಪ್ರತಿಷ್ಠಾ ಅಭಿಯಾನದ ತಾಲೂಕು ಸಂಯೋಜಕ ಕೃಷ್ಣಪ್ರಸಾದ ಶೆಟ್ಟಿ ಹಿರೇಬೆಟ್ಟು ಹಾಗೂ ಅಭಿಯಾನದ ತಾಲೂಕು ಸಂಚಾಲಕ ಪ್ರಕಾಶ್ ಪುತ್ರನ್ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಹಿರಿಯಡಕ ತಾಲೂಕಿನ ವಿವಿಧ ಗ್ರಾಮಗಳ ಸುಮಾರು ಇನ್ನೂರು ಮಂದಿ ಪ್ರತಿನಿಧಿಗಳು ಉಪಸ್ಥಿತರಿದ್ದರು