Home » ಮನೆಯೇ ಸಂಸ್ಕೃತಿಯ ಮೂಲ : ಪ್ರಕಾಶ್ ಮಲ್ಪೆ
 

ಮನೆಯೇ ಸಂಸ್ಕೃತಿಯ ಮೂಲ : ಪ್ರಕಾಶ್ ಮಲ್ಪೆ

by Kundapur Xpress
Spread the love

ಕುಂದಾಪುರ : ಭೂಮಿ, ನೀರು, ಗೋವುಗಳ ಪ್ರಾಮುಖ್ಯತೆಯನ್ನು ಒಂದು ಮಗುವಿಗೆ ತಾಯಿ ತಿಳಿಸುವುದರ ಮೂಲಕ ಮನೆಯಿಂದ ಸಂಸ್ಕಾರ ಸಂಸ್ಕೃತಿಯ ಪಾಠ ಪ್ರಾರಂಭವಾಗುತ್ತದೆ. ಭಾರತದ ಮೇಲೆ ಅದೆಷ್ಟೇ ದಾಳಿಗಳಾದರೂ ನಮ್ಮ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡಿದ್ದೇವೆ. ಜಗತ್ತಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತದ ಕೊಡುಗೆ ಅಪಾರ ಎಂದು ಸಾಂಸ್ಕೃತಿಕ ಚಿಂತಕ ಶ್ರೀ ಪ್ರಕಾಶ್ ಮಲ್ಪೆ ಹೇಳಿದರು.
ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಐಕ್ಯೂಎಸಿ ಘಟಕ ಹಮ್ಮಿಕೊಂಡ ‘ಪ್ರೇರಣಾ’ ಶಿಬಿರದಲ್ಲಿ ‘ನಮ್ಮ ಸಂಸ್ಕೃತಿ’ ವಿಷಯದ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ., ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಕಾರ್ಯಕ್ರಮ ಸಂಯೋಜಕ ಹಾಗೂ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಶ್ರೀಕಾಂತ್ ಪಿ., ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಪೃಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

 

Related Articles

error: Content is protected !!