165
ಕುಂದಾಪುರ : ಬ್ರಹ್ಮಾವರ ತಾಲೋಕಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆಯಲ್ಲಿ ನಡೆಯುತ್ತಿರುವ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನಕ್ಕೆ ಬಂಡಾಡಿ ಶ್ರೀ ಸತೀಶ್ ಶೆಟ್ಟಿ ವಡ್ಡರ್ಸೆ ಇವರು ಚಾಲನೆ ನೀಡಿದರು.
ಈ ಸಂದರ್ಭ ಉದ್ಯಮಿ ವಾಸು ಪೂಜಾರಿ ಬನ್ನಾಡಿ, ಫ್ರೆಂಡ್ಸ್ ವಡ್ಡರ್ಸೆ ಇದರ ಅಧ್ಯಕ್ಷ ಉಮೇಶ ಮರಕಾಲ, ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ಪಿ. ಕೃಷಿಕರಾದ ರಘುರಾಮ್ ಶೆಟ್ಟಿ, ಬಾಬು ದೇವಾಡಿಗ ವಡ್ಡರ್ಸೆ ಹಾಗೂ ಸಹ ಶಿಬಿರಾಧಿಕಾರಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಶುಭ ಹಾರೈಸಿದರು.
ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು. ಎನ್.ಎಸ್.ಎಸ್. ಸ್ವಯಂಸೇವಕರಾದ ಆಶಿಕ್ ಪ್ರಾರ್ಥಿಸಿ, ಆಕಾಶ ಆಚಾರ್ ಸ್ವಾಗತಿಸಿ, ರಿಷಿತಾ ವಂದಿಸಿ, ರಶ್ಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)