136
ಕೋಟ : ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಬಾರಿಕೆರೆ ನಿವಾಸಿಯಾಗಿರುವ ರಾಘವೇಂದ್ರ ಪೂಜಾರಿಯವರಿಗೆ ಬಾರಿಕೆರೆ ಯುವಕ ಮಂಡಲದ ವತಿಯಿಂದ 50.000ರೂಪಾಯಿ ಆರ್ಥಿಕ ಸಹಾಯ ಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್,
ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್,ಸAಘದ ಪ್ರಮುಖರಾದ ರತ್ನಾಕರ ಬಾರಿಕೆರೆ,ಪವನ್ ಕುಂದರ್,ಅಶೋಕ್ ಕುಂದರ್, ರಮೇಶ್ ಒಳಮಾಡು,ಸಂತೋಷ್,ಅವಿನಾಶ,ಗಣಪಣ್ಣ,ವಿಜಯ್ ಪೂಜಾರಿ,ಪ್ರಮೋದ್ ಆಚಾರ್,ಉದಯ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.

