ಬಸ್ರೂರು : 359 ವರ್ಷಗಳ ಹಿಂದೆ ಮಹಾರಾಷ್ಟ್ರದ ಸಿಂಧೂ ದುರ್ಗದಿಂದ ಹೊರಟು ಬಸ್ರೂರಿಗೆ ತನ್ನ ನೌಕಾ ಸೇನೆಯೊಂದಿಗೆ ದಂಡೆತ್ತಿ ಬಂದು ಇಲ್ಲಿ ಅಕ್ರಮವಾಗಿ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಪೋರ್ಚುಗೀಸರು ಹಾಗೂ ಡಚ್ಚರನ್ನು ಹೊಡೆದೋಡಿಸಿ ಇಲ್ಲಿ ಹಿಂದುವಿ ಸ್ವರಾಜ್ಯವನ್ನುನಿರ್ಮಾಣ ಮಾಡಿ ಯುದ್ಧದ ಎಲ್ಲಾ ತಂತ್ರಗಾರಿಕೆಯನ್ನು ಅರಿತಿದ್ದ ಶಿವಾಜಿ ಮಹಾರಾಜರು ಜಗತ್ತಿನ ಶ್ರೇಷ್ಠ ಸೇನಾನಿ ಎಂದು ಆರೆಸ್ಸೆಸ್ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ। ಕಲ್ಲಡ್ಕ ಪ್ರಭಾಕರ ಭಟ್ ನುಡಿದರು
ಫೆಬ್ರವರಿ 13ರಂದು ಬಸ್ರೂರಿನ ಶ್ರೀ ದೇವಿ ದೇವಸ್ಥಾನ ವಠಾರದಲ್ಲಿ ಬಸ್ರೂರು ಛತ್ರಪತಿ ಶಿವಾಜಿ ಅಭಿಮಾನಿ ಬಳಗದಿಂದ ನಡೆದ ಬಸ್ರೂರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾ. ಪ್ರಭಾಕರ ಭಟ್ ದಿಕ್ಕೂಚಿ ಭಾಷಣ ಮಾಡಿದರು
ಆಕರ್ಷಕ ಶೋಭಾಯಾತ್ರೆ
ಗಂಗೊಳ್ಳಿಯ ಉಪ್ಪಿನಕುದ್ದು ಕಳುವಿನ ಬಾಗಿಲ ಶನೀಶ್ವರ ದೇವಸ್ಥಾನದ ಬಳಿಯಿಂದ ಹಲವಾರು ದೋಣಿಗಳ ಮೂಲಕ ಶಿವಾಜಿ ಪ್ರತಿಮೆಯನ್ನು ಬಸ್ರೂರಿನ ಮಂಡಿಕೇರಿಗೆ ತರಲಾಯಿತು ಮಂಡಿಕೇರಿಯಿಂದ ಬಸ್ರೂರು ದೇವಿ ದೇವಸ್ಥಾನದವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು ಈ ಸಂದರ್ಭದಲ್ಲಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಬಜರಂಗ ದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು