Home » ಫೋಕ್ಸೋ ಮತ್ತು ಸೈಬರ್ ಕ್ರೈಮ್ ಕುರಿತು ಅರಿವು ಕಾರ್ಯಕ್ರಮ
 

ಫೋಕ್ಸೋ ಮತ್ತು ಸೈಬರ್ ಕ್ರೈಮ್ ಕುರಿತು ಅರಿವು ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್, ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಫೋಕ್ಸೋ ಮತ್ತು ಸೈಬರ್ ಕ್ರೈಮ್ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರದ ವಕೀಲರಾದ ಶ್ರೀ ರಾಘವೇಂದ್ರ ಚರಣ್ ನಾವಡ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಫೋಕ್ಸೋ ಕಾಯ್ದೆ ಹಾಗೂ ಸೈಬರ್ ಕ್ರೈಮ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭ ಅವರು ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚುತ್ತಿರುವುದರಿಂದ ಫೋಕ್ಸೋ ಮತ್ತು ಸೈಬರ್ ಅಪರಾಧಗಳ ಬಗ್ಗೆ ಸಮರ್ಪಕ ಅರಿವು ಬಹಳ ಅಗತ್ಯವಾಗಿದೆ. ಸರಿಯಾದ ಮಾರ್ಗದರ್ಶನ ಮತ್ತು ಜಾಗೃತಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದರು. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಫೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಜ್ಞಾನ ಮತ್ತು ಜಾಗೃತಿಯ ಮೂಲಕವೇ ಇಂತಹ ಅಪರಾಧಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಈ ಸಂದರ್ಭ ರೋಟರಿ ಕ್ಲಬ್, ಕುಂದಾಪುರ ಕಾರ್ಯದರ್ಶಿ ಶ್ರೀ ಸರ್ವೋದಯ ಪೂಜಾರಿ ಉಪಸ್ಥಿತರಿದ್ದರು.
ರೊಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಶ್ರೀ ನಾಗರಾಜ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ವಿನಯಾ ವಿ. ಶೆಟ್ಟಿ ಸ್ವಾಗತಿಸಿ, ಶ್ರೀ ಗಿರಿರಾಜ್ ಭಟ್ ವಂದಿಸಿ, ವಿದ್ಯಾರ್ಥಿನಿ ರಿಷಿತಾ ಪ್ರಾರ್ಥಿಸಿ, ವಿದ್ಯಾರ್ಥಿ ಪ್ರತಿನಿಧಿಗಳಾದ ದ್ವಿತೀಯ ಬಿ.ಕಾಂ. (ಎ) ರಕ್ಷಿತಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ದ್ವಿತೀಯ ಬಿಸಿಎ (ಬಿ) ವಿಶ್ವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.

 

Related Articles

error: Content is protected !!