Home » ಸೈಬರ್‌ ಅಪರಾಧ ಪ್ರಕರಣಗಳು
 

ಸೈಬರ್‌ ಅಪರಾಧ ಪ್ರಕರಣಗಳು

by Kundapur Xpress
Spread the love

ಹಣ ಹೂಡಿಕೆ ಮಾಡಿ ಲಾಭಗಳಿಸುವುದ್ದಾಗಿ ವಂಚನೆ

ಬ್ರಹ್ಮಾವರ: ಸರಹದ್ದಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯ ನಡುಹಿತ್ಲು ಎಂಬಲ್ಲಿ  ವಾಸವಾಗಿರುವ ಶ್ರೇಯಾ (21) ವಾರಂಬಳ್ಳಿ ಇವರಿಗೆ 24.11.2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅವರ Telegram ಖಾತೆಗೆ ಸೈಬರ್‌ ಅಪರಾಧಿಯು ತನ್ನ 9108303652 ನೇ ನಂಬರ್‌ ಮೂಲಕ CME Group  ಕಳುಹಿಸಿ, ಸದ್ರಿ ಗ್ರೂಪಿನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡುವ ಬಗ್ಗೆ ತಿಳಿಸಿ  ಶ್ರೇಯಾ ರಿಂದ ಮೊದಲು ರೂ 2000/- ಪಡೆದು ಅದಕ್ಕೆ ರೂ 2,800/- ಅನ್ನು ಖಾತೆಗೆ ಕಳುಹಿಸಿ,ನಂಬುವಂತೆ ಮಾಡಿ ನಂತರ ಫಿರ್ಯಾದಿದಾರರ ಕರ್ನಾಟಕ ಬ್ಯಾಂಕ್‌ ಖಾತೆಯಿಂದ ರೂ 55,000/ ಮತ್ತು ಯೂನಿಯನ್‌ ಬ್ಯಾಂಕ್‌  ಶಾಖೆಯ ಖಾತೆಯಿಂದ ರೂ 50,000/- ಹಣವನ್ನು ಸೈಬರ್‌ ಅಪರಾಧಿಯು ತನ್ನ  UPI ನಂಬರಿಗೆ ಗೂಗಲ್‌ ಪೇ ಮೂಲಕ ಒಟ್ಟು ರೂ 1,05,000/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 241/2025 ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ವಿವಿಧ ಸವಲತ್ತುಗಳನ್ನು ಒದಗಿಸುವ ಕಾರ್ಡ್ ಕುರಿತಾಗಿನ ಜಾಹೀರಾತು : ಸೈಬರ್‌ ವಂಚನೆ

ಉಡುಪಿ: ಕುಂದಾಪುರ ತಾಲೂಕೀನ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ  ಹೆಚ್‌ ರಘುರಾಮ ಶೆಟ್ಟಿ (72) 28/11/2025 ರಂದು ಫೇಸ್-ಬುಕ್ ನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಆಫ್ ಬರೋಡದಿಂದ ವಿವಿಧ ಸವಲತ್ತುಗಳನ್ನು ಒದಗಿಸುವ ಕಾರ್ಡ್ ಕುರಿತಾಗಿನ ಜಾಹೀರಾತೊಂದನ್ನು ನೋಡಿ ಅದರಲ್ಲಿದ್ದ ಲಿಂಕ್ ಅನ್ನು ಒಪನ್ ಮಾಡಿದ್ದು, ಆನಂತರದಲ್ಲಿ 29/11/2025 ಮೊಬೈಲ್‌ ಗೆ  ಅಪರಿಚಿತ ಮೊಬೈಲ್ ನಂಬ್ರದಿಂದ ಕರೆ ಬಂದಿದ್ದು ಕರೆ ಸ್ವೀಕರಿಸಿದಾಗ ಆತ ತನ್ನನ್ನು ಬ್ಯಾಂಕ್ ಆಫ್ ಬರೋಡ ಅಲ್ಕಾಪುರಿ, ಗುಜರಾತ್ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದು, ಹಿಂದಿನ ದಿನ ಫೇಸ್-ಬುಕ್ ನಲ್ಲಿ ಕ್ಲಿಕ್ ಮಾಡಿರುವ ಜಾಹೀರಾತಿನ ಲಿಂಕ್ ನ ಬಗ್ಗೆ ತಿಳಿಸಿದ್ದು ಹಾಗೂ ಸದ್ರಿ ಲಿಂಕ್‌ನಲ್ಲಿರುವ ಕಾರ್ಡ್ ಅನ್ನು ಹಾಗೂ ಅದರ ಉಪಯೋಗವನ್ನು ಪಡೆದುಕೊಳ್ಳಲು ಫೇಸ್-ಬುಕ್ ನಲ್ಲಿನ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬ್ರ, ಈ-ಮೇಲ್ ಹಾಗೂ ಇತರೆ ವೈಯುಕ್ತಿಕ ವಿವರಗಳನ್ನು ಭರ್ತಿಗೊಳಿಸುವಂತೆ  ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ವಿವರ ಭರ್ತಿಗೊಳಿಸಿ ಹಾಗೂ ಬ್ಯಾಂಕ್ ಒ.ಟಿ.ಪಿ ಯನ್ನು ಅಪರಿಚಿತನೊಂದಿಗೆ ಹಂಚಿಕೊಂಡಿದ್ದು, ಆನಂತರದಲ್ಲಿ ಬ್ಯಾಂಕ್ ಖಾತೆ ಯಿಂದ ರೂ. 5,75,003.54/- ರೂ.3,59,013.08/-, ರೂ.7,96,021.16, ರೂ.3,98,018.08/- ರಂತೆ ಒಟ್ಟು ರೂ.21,28,055.86/- ಅನ್ನು ಫಿರ್ಯಾದಿದಾರರ ಬ್ಯಾಂಕ್‌ ಖಾತೆಯಿಂದ ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ವಂಚನೆಯಿಂದ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಸೆನ್‌  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2025, ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್. & ಕಲಂ 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!