ಕುಂದಾಪುರ: ನವೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ಕುಂದು ಕೊರತೆ ಪರಿಹಾರ ಕೋಶ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗಾಗಿ “ಉತ್ತಮ ನೈರ್ಮಲ್ಯ ಮತ್ತು ಸಾಮಾಜಿಕ ಅಭಿವೃದ್ಧಿ” ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಮನೀಶ್ ಆಸ್ಪತ್ರೆಯ ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಪ್ರಮೀಳಾ ನಾಯಕ್ ಮಾತನಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಿರಬೇಕು. ನಿತ್ಯವು ಒಂದು ಜಾತಿಯ ತರಕಾರಿ, ಒಂದು ಲೋಟ ಹಾಲು, ಒಂದಿಷ್ಟು ವ್ಯಾಯಾಮ ನಿಮ್ಮ ಕೆಲಸಗಳನ್ನು ಶಿಸ್ತು ಅಳವಡಿಸಿಕೊಳ್ಳಿ. ಆಗ ನಿಮ್ಮ ಆರೋಗ್ಯ ಆಲೋಚನೆ ಚೆನ್ನಾಗಿ ಇರುತ್ತದೆ. ಹಾಗೆ ಸಾಮಾಜಿಕವಾಗಿ ನೀವು ಎದುರಿಸುವ ಸವಾಲುಗಳನ್ನು ಸ್ವೀಕರಿಸಲು ಮತ್ತು ಎದುರಿಸುವ ಆತ್ಮಸ್ಥೈರ್ಯ ಬರುತ್ತದೆ ಎಂದು ಹೇಳಿದರು. ಕೆಲವು ನಕಾರಾತ್ಮಕ ಆಲೋಚನೆಗಳಿಂದ ಹೊರಬರಲು ಮಾಡಬೇಕಾದ ಸರಳ ವಿಧಾನಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ಕುಂದುಕೊರತೆ ಪರಿಹಾರ ಕೋಶದ ಸಂಯೋಜಕರಾದ ಪ್ರೊ.ಮೀನಾಕ್ಷಿ ಎನ್ ಎಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಕುಂದುಕೊರತೆ ಪರಿಹಾರ ಕೋಶದ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಮಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸನಾ ಸ್ವಾಗತಿಸಿದರು. ನಿಶಾಲಿ ಯು, ಅತಿಥಿಗಳನ್ನು ಪರಿಚಯಿಸಿದರು. ಮಿಥುನ ಪ್ರಭು ವಂದಿಸಿದರು.