ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಸೋಮವಾರ ಜಗತ್ತಿನ ಅತಿದೊಡ್ಡ ಜವಳಿ. ಸಮಾರಂಭ ಭಾರತ ಟೆಕ್ಸ್ 2024ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಭಾರತದ ಶ್ರೀಮಂತ ಜವಳಿ ಪರಂಪರೆಯನ್ನು ಉತ್ತೇಜಿಸುವುದರೊಂದಿಗೆ ಉದ್ಯಮ ಅಭಿವೃದ್ಧಿಗೊಳಿಸಲು ಇದು ಪ್ರಮುಖ ಮೈಲಿಗಲ್ಲಾಗಿ ಪರಿಣಮಿಸಲಿದೆ. ಭಾರತದ ಹತ್ತಿ ಬೆಳೆಗಾರರ ಪ್ರಯೋಜನಕ್ಕಾಗಿ ಕೇಂದ್ರ ಆರಂಭಿಸಿರುವ ಕಸ್ತೂರಿ ಕಾಟನ್ (ಹತ್ತಿ) ಉಪಕ್ರಮ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರಲಿದೆ. ಮುಖ್ಯವಾಗಿ ಕೇಂದ್ರ ಈಗಾಗಲೇ ಚಾಲನೆ ನೀಡಿರುವ ಕಸ್ತೂರಿ ಕಾಟನ್ ಉಪಕ್ರಮವು ಭಾರತದ ಸ್ವಂತ ಹೆಗ್ಗುರುತು ಮೂಡಿಸುವಲ್ಲಿ ಬಹುದೊಡ್ಡ ಹೆಜ್ಜೆ ಇದಾಗಲಿದೆ.