Home » ಭಾರತ ನಗರ ವಾರ್ಡಿನ ವಿವಿಧ ಕಾಮಗಾರಿ ಉದ್ಘಾಟನೆ
 

ಭಾರತ ನಗರ ವಾರ್ಡಿನ ವಿವಿಧ ಕಾಮಗಾರಿ ಉದ್ಘಾಟನೆ

by Kundapur Xpress
Spread the love

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಭಾರತ ನಗರ ವಾರ್ಡಿನ ವಿವಿಧ ಕಾಮಗಾರಿಗಳಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಅನುದಾನದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಭಾರತ ನಗರ ವಾರ್ಡಿನ ತೆಂಕು ಕಲ್ಯಾ ರಸ್ತೆ ಅಭಿವೃದ್ಧಿ – 40 ಲಕ್ಷ, ಭಾರತ ನಗರ ವಾರ್ಡಿನ ಶವ ಶಿಥಲೀಕರಣ ಕಟ್ಟಡ ನಿರ್ಮಾಣ – 18.5 ಲಕ್ಷ, ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಅನುದಾನದಡಿ ಶವ ಶಿಥಲೀಕರಣ ಘಕಟದ 4 ಚೇಂಬರ್ – 6 ಲಕ್ಷ ಸೇರಿದಂತೆ ಒಟ್ಟು 64.5 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಲತಾ ದೇವಾಡಿಗ, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಬಸವರಾಜ್, ಆಡಳಿತ ವೈದ್ಯಾಧಿಕಾರಿಗಳಾದ ರಾಜಶ್ರೀ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ದೃತಿ ಆಳ್ವ, ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಹ್ಮಣ್ಯ, ಎಂ.ಆರ್.ಪಿ.ಎಲ್ ನ ಕೇಶವ, ಕಾಪು ಜೆ.ಸಿ.ಐ ಅಧ್ಯಕ್ಷರಾದ ಅನಿತಾ ಹೆಗ್ಡೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

 

Related Articles

error: Content is protected !!