ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ‘ಬ್ರಹ್ಮಕಲಶೋತ್ಸವ’ ಹಾಗೂ ’65ನೇ ಭಜನಾ ಮಂಗಲೋತ್ಸವ’ದ ಪ್ರಯುಕ್ತ ಸಂಘದ ಸದಸ್ಯರು ಹಾಗೂ ಊರ ಪರವೂರ ಭಕ್ತಾಭಿಮಾನಿಗಳ ಉದಾರ ನೆರವಿನಿಂದ ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದ ಪಾಕ ಶಾಲೆಗೆ ಸುಮಾರು ರೂ.2.50 ಲಕ್ಷಗಳ ವೆಚ್ಚದಲ್ಲಿ ‘ಶಾಶ್ವತ ಪಾತ್ರೆ ಪರಿಕರ’ಗಳನ್ನು ಭಜನಾ ಸೇವೆ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮಂಜುಶ್ರೀ ಭೋಜನ ಶಾಲೆಯಲ್ಲಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಭಜನೆಯ ಮೂಲಕವೇ ಸಮಾಜ ಬಾಂಧವರನ್ನು ಸಂಘಟಿಸಿ ಅಸ್ತಿತ್ವಕ್ಕೆ ಬಂದಿರುವ ಬಿಲ್ಲವ ಸೇವಾ ಸಂಘ ಹಾಗೂ ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ 65ನೇ ಭಜನಾ ಮಂಗಲೋತ್ಸವದ ಸವಿ ನೆನಪಿಗಾಗಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಎಲ್ಲ ಹಿರಿಯರನ್ನು ಸ್ಮರಿಸಿಕೊಂಡು ಹಮ್ಮಿಕೊಂಡಿರುವ ದೂರದರ್ಶಿತ್ವದ ಸೇವಾ ಯೋಜನೆಯಡಿ ಸಂಘದ ಸಮುದಾಯ ಭವನದ ಪಾಕ ಶಾಲೆಗೆ ಶಾಶ್ವತ ಪಾತ್ರೆ ಪರಿಕರಗಳ ಸಮರ್ಪಣೆ ನಡೆದಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಸಮಿತಿಯ ಉಪಾಧ್ಯಕ್ಷ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜೊತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ಆಡಳಿತ ಸಮಿತಿಯ ಸದಸ್ಯರುಗಳಾದ ಸುಧಾಕರ್ ಎ., ಭಾಸ್ಕರ ಅಂಚನ್, ರಾಜೇಂದ್ರ ಪಂದುಬೆಟ್ಟು, ವಿನಯ್ ಕುಮಾರ್, ಗುರುರಾಜ್ ಪೂಜಾರಿ, ನಿತಿನ್ ಕುಮಾರ್, ಜನಾರ್ಧನ ಪೂಜಾರಿ, ಮಾಜಿ ಪ್ರ. ಕಾರ್ಯದರ್ಶಿ ಕುಶಲ್ ಕುಮಾರ್ ಎ., ಗ್ರಾ.ಪಂ. ಸದಸ್ಯ ರಾಜೇಶ್ ಸುವರ್ಣ, ಮಹಿಳಾ ಘಟಕದ ಸಂಚಾಲಕಿ ಗೋದಾವರಿ ಎಮ್. ಸುವರ್ಣ, ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಕಾರ್ಯದರ್ಶಿ ವಾಣಿಶ್ರೀ ಅರುಣ್ ಕುಮಾರ್, ಕೋಶಾಧಿಕಾರಿ ಸವಿತಾ ಸಂತೋಷ್, ಸಹ ಸಂಘಟನಾ ಕಾರ್ಯದರ್ಶಿ ಸಂಚಲ ಶಶಿಕಾಂತ್, ಸಮಿತಿ ಸದಸ್ಯರುಗಳಾದ ವಿಜಯಲಕ್ಷ್ಮಿ ಕೃಷ್ಣ ಕೋಟ್ಯಾನ್, ಸುನೀತಾ ಶಂಕರ ಪೂಜಾರಿ, ಕಲ್ಯಾಣಿ ಆನಂದ ಕೋಟ್ಯಾನ್, ಸುಮತಿ ಶ್ರೀನಿವಾಸ, ಸುಗಂಧಿ ಸುಧಾಕರ್, ಶಿಲ್ಪಾ ಉಮೇಶ್, ಶ್ರೀ ಗುರು ಕುಣಿತ ಭಜನಾ ಮಂಡಳಿಯ ಸಂಚಾಲಕಿ ಆಶ್ವಿನಿ ಪೂಜಾರಿ, ಸದಸ್ಯರುಗಳಾದ ಕಾವ್ಯ, ರೋಷನಿ, ಶರಣ್ಯ, ತ್ರಿಷಾ, ಅರ್ಚಕರಾದ ಅವಿನಾಶ್ ಪೂಜಾರಿ, ಜೀವನ್, ಅದಿತ್ ಹಾಗೂ ಅಚ್ಯುತ ಪೂಜಾರಿ, ಸುಧಾಕರ ಪೂಜಾರಿ, ಜಿತಿನ್, ರಿದೇಶ್ ಮುಂತಾದವರು ಉಪಸ್ಥಿತರಿದ್ದರು.